ಕರ್ನಾಟಕ ರಾಜ್ಯದ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಬಗ್ಗೆ ಈಗಾಗಲೇ ಹಲವು ಮಾಹಿತಿ ನಿಮಗೆ ತಿಳಿದಿದೆ.
ಈ ಬದಲಾವಣೆ ನಂತರ ಹಲವಾರು ಶಾಸಕರ ಜಾಗ ಬದಲಾಗುವ ಸಾಧ್ಯತೆ ಹೆಚ್ಚಿದೆ. ಇದರಲ್ಲಿ ಯಾವ ಹೊಸ ಶಾಸಕರಿಗೆ ಅವಕಾಶ ಸಿಗಲಿದೆ ಹಾಗೆ ಯಾರಿಗೆಲ್ಲ ತಮ್ಮ ಸ್ಥಾನದಿಂದ ಕೈಬಿಡಲಾಗುತ್ತದೆ ಎಂದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.
ಹಾಗಾದರೆ ಯಾವ ಶಾಸಕರಿಗೆ ಸಿಗಲಿದೆ ಹೊಸ ಸ್ಥಾನ. ಕೆಪಿಸಿ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಹೆಸರು ಕೇಳಿಬರುತ್ತಿದೆ. ಹಾಗೆಯೇ 4 ಡಿಸಿಎಂ ಸ್ಥಾನಕ್ಕೆ OBC ಯಿಂದ ಯತೀಂದ್ರ, ದಲಿತ ಕೋಟಾದಿಂದ ಪ್ರಿಯಾಂಕ್ ಖರ್ಗೆ ಅಥವಾ ಪರಮೇಶ್ವರ್, ಮುಸ್ಲಿಂ ಕೋಟಾದಲ್ಲಿ ಜಮೀರ್ ಅಥವಾ UT ಖಾದರ್, ಅಲ್ಪಸಂಖ್ಯಾತ ಕೋಟದಿಂದ ಕೆ ಜೆ ಜಾರ್ಜ್, ಲಿಂಗಾಯತ ಸಮುದಾಯದಲ್ಲಿ ಈಶ್ವರ್ ಖಂಡ್ರೆ ಹಾಗೂ BC ಪಾಟೀಲ್ ಅವರ ಹೆಸರು ನೇಮಕ ಮಾಡುವ ಚರ್ಚೆ ನಡೆದಿದೆ.
ಸದ್ಯಕ್ಕೆ CM ಸ್ಥಾನಕ್ಕೆ ಡಿಕೆ ಶಿವಕುಮಾರ್ ಮುಂಚೂಣಿಯಲ್ಲಿದ್ದು. ಅಧಿಕೃತ ಮಾಹಿತಿಗೆ ನಾಳೆವರೆಗೆ ಕಾಯಬೇಕಾಗಿದೆ.





