---Advertisement---

ಉಪನ್ಯಾಸಕರ ಸಂಘದ ಜಿಲ್ಲಾ ಚುನಾವಣೆಗೆ ತೆರೆ : ಹರಿಪ್ರಸಾದ್ ಬಿ ಅಧ್ಯಕ್ಷರಾಗಿ ಆಯ್ಕೆ

drusti news logo
On: June 8, 2026
Dakshina Kannada Lecturers Association Election 2026 Hariprakash B Elected President
---Advertisement---

ಮಂಗಳೂರು, ಜೂನ್ 8 : ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ 2026-31ನೇ ಸಾಲಿನ ಜಿಲ್ಲಾ ಪದಾಧಿಕಾರಿಗಳ ಚುನಾವಣೆ 07-06-2026 ಆದಿತ್ಯವಾರ ದಂದು ನಡೆದಿದ್ದು ಅದರ ಫಲಿತಾಂಶ ಪ್ರಕಟವಾಗಿ ನೂತನ ಪದಾಧಿಕಾರಿಗಳ ತಂಡ ಆಯ್ಕೆಯಾಗಿದೆ.

ಚುನಾವಣೆಯಲ್ಲಿ ಶ್ರೀ ಹರಿಪ್ರಕಾಶ್ ಬಿ ಅವರು ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಹಾಗೂ ಶ್ರೀ ವಿಠಲ ಎಂ ರಾಜ್ಯ ಪದಾಧಿಕಾರಿ ಯಾಗಿ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹಿತಾಸಕ್ತಿ ಕಾಪಾಡುವುದು, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವುದು ಹಾಗೂ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ನೂತನ ತಂಡ ತಿಳಿಸಿದೆ.

Dakshina Kannada Lecturers Association Election 2026 Hariprakash B Elected President

ಅಧ್ಯಕ್ಷ ಸ್ಥಾನ : ಶ್ರೀ ಹರಿಪ್ರಕಾಶ್ ಬಿ (ಸರಕಾರಿ ಪದವಿ ಪೂರ್ವ ಕಾಲೇಜು, ಬಿಳಿಯೂರುಕಟ್ಟೆ)

ಕಾರ್ಯಾಧ್ಯಕ್ಷರು : ಶ್ರೀ ಚಂದ್ರನಾಥ ಎಂ (ಸರಕಾರಿ ಪದವಿ ಪೂರ್ವ ಕಾಲೇಜು, ಚೇಳ್ಯಾರು)

ಉಪಾಧ್ಯಕ್ಷರು : ಶ್ರೀಮತಿ ಇಂದಿರಾ (ಶ್ರೀ ರಾಮಚಂದ್ರ ಪದವಿ ಪೂರ್ವ ಕಾಲೇಜು, ಪೆರ್ನೆ)

ಖಚಾಂಚಿ ಸ್ಥಾನ : ಶ್ರೀ ಸಚೇತ್ ಸುವರ್ಣ(ಸರಕಾರಿ ಪದವಿ ಪೂರ್ವ ಕಾಲೇಜು, ಕಾವೂರು)

ಪ್ರಧಾನ ಕಾರ್ಯದರ್ಶಿಗಳು : ಶ್ರೀ ಶೀನಪ್ಪ ಎನ್ (ಸರಕಾರಿ ಪದವಿ ಪೂರ್ವ ಕಾಲೇಜು, ಸಿದ್ಧಕಟ್ಟೆ)

ಪ್ರಧಾನ ಸಂಘಟನಾ ಕಾರ್ಯದರ್ಶಿಗಳು : ಶ್ರೀ ಜಯಪ್ರಕಾಶ್ ಆರ್ (ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು, ಸುಬ್ರಮಣ್ಯ)

ಕಾರ್ಯದರ್ಶಿಗಳು : ಶ್ರೀ ಶೀನಾ ನಾಡೋಲಿ (ಸರಕಾರಿ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ)

ಜಂಟಿ ಕಾರ್ಯದರ್ಶಿಗಳು : ಶ್ರೀ ರಮಾನಂದ ಕೆ (ಸರಕಾರಿ ಪದವಿ ಪೂರ್ವ ಕಾಲೇಜು, ಕಾರ್ನಾಡು, ಮೂಲ್ಕಿ)

ಸಂಚಾಲಕರು : ಡಾ. ಮಧುಕೇಶ್ವರ ಶಾಸ್ತ್ರಿ (ಕೆನರಾ ಪದವಿ ಪೂರ್ವ ಕಾಲೇಜು, ಮಂಗಳೂರು)

ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆಗೆ ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದು, ಸಂಘದ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳಲಿವೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಉಪನ್ಯಾಸಕರ ಸಮಸ್ಯೆಗಳ ಪರಿಹಾರ, ಶೈಕ್ಷಣಿಕ ಗುಣಮಟ್ಟದ ಸುಧಾರಣೆ ಹಾಗೂ ವೃತ್ತಿಪರ ಅಭಿವೃದ್ಧಿಗೆ ಹೊಸ ತಂಡ ಆದ್ಯತೆ ನೀಡುವ ನಿರೀಕ್ಷೆ ವ್ಯಕ್ತವಾಗಿದೆ.

ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಜಿಲ್ಲೆಯ ಶಿಕ್ಷಣ ವಲಯದಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

Leave a Comment