---Advertisement---

ಮಾನಸಿಕ ಅಸ್ವಸ್ಥ ಯುವತಿ ಮೇಲೆ ಅತ್ಯಾಚಾರ ಪ್ರಕರಣ; 7 ಮಂದಿ ಬಂಧನ

drusti news logo
On: August 15, 2026
ಗದಗ ಅತ್ಯಾಚಾರ ಪ್ರಕರಣದಲ್ಲಿ ಮಾನಸಿಕ ಅಸ್ವಸ್ಥ ಯುವತಿ ಮೇಲೆ ದೌರ್ಜನ್ಯ, 7 ಮಂದಿ ಬಂಧನ
---Advertisement---

ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿ, ಆಕೆ ಗರ್ಭಿಣಿಯಾದ ಬಳಿಕ ಅಕ್ರಮವಾಗಿ ಗರ್ಭಪಾತ ಮಾಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಗದಗ ಮಹಿಳಾ ಠಾಣೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಆರಂಭದಲ್ಲಿ ಇಬ್ಬರು ಆರೋಪಿಗಳಿದ್ದಾರೆ ಎಂದು ತಿಳಿದುಬಂದಿದ್ದ ಪ್ರಕರಣದ ತನಿಖೆ ಮುಂದುವರಿದಂತೆ, ಅತ್ಯಾಚಾರದಲ್ಲಿ ನಾಲ್ವರು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ನಾಲ್ವರು ಅತ್ಯಾಚಾರ ಆರೋಪಿಗಳ ಜೊತೆಗೆ ಅಕ್ರಮ ಗರ್ಭಪಾತಕ್ಕೆ ನೆರವಾದ ಆರ್‌ಎಂಪಿ ವೈದ್ಯ ಹಾಗೂ ಸ್ಟಾಫ್ ನರ್ಸ್ ಸೇರಿದಂತೆ ಇತರರನ್ನೂ ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಗದಗದ ಬೆಟಗೇರಿ ನಿವಾಸಿಗಳಾದ ಸಿಕಂದರ್ ಬೇಪಾರಿ, ಶಬ್ಬೀರಹ್ಮದ್ ಲಂಗೋಟಿ, ಪ್ರದೀಪ್ ನವಲೇಕರ್ ಹಾಗೂ ಭರತ ಕೊರವರ ಯುವತಿಯನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಯುವತಿ ಗರ್ಭಿಣಿಯಾಗಿರುವುದು ಸುಮಾರು ಮೂರು ತಿಂಗಳ ಬಳಿಕ ಕುಟುಂಬದವರಿಗೆ ತಿಳಿದುಬಂದಿದೆ. ಬಳಿಕ ಆರೋಪಿಗಳು ಸಂತ್ರಸ್ತೆಯ ಕುಟುಂಬಕ್ಕೆ ಹಣದ ಆಮಿಷವೊಡ್ಡಿ ದೂರು ನೀಡದಂತೆ ಒತ್ತಡ ಹೇರಿದ್ದರು ಹಾಗೂ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಯುವತಿಯ ಗರ್ಭಪಾತ ಮಾಡಿಸಲು ಲಕ್ಷ್ಮೇಶ್ವರ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಆರ್‌ಎಂಪಿ ವೈದ್ಯ ಡಾ. ನಾಗರಾಜ್ ಕಮತರ, ಶಿಗ್ಲಿ ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ರೇಖಾ ಶಿರಹಟ್ಟಿ ಹಾಗೂ ಸಂದೀಪ್ ಎಂಬುವವರು ನೆರವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗರ್ಭಪಾತಕ್ಕೆ ಮಾತ್ರೆಗಳನ್ನು ನೀಡಲಾಗಿತ್ತು ಎಂಬ ಆರೋಪವೂ ಪ್ರಕರಣದಲ್ಲಿದೆ.

ಈ ಪ್ರಕರಣದಲ್ಲಿ ಇತರ ಕೆಲವರ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ. ಗರ್ಭಪಾತದ ಮಾತ್ರೆಗಳನ್ನು ವೈದ್ಯರ ಅಧಿಕೃತ ಚೀಟಿ ಇಲ್ಲದೆ ಮಾರಾಟ ಮಾಡಿದವರ ಪತ್ತೆಗೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೃತ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸಿದವರು ಅಥವಾ ರಾಜಿ ಮಾಡಿಸಲು ಮುಂದಾದವರು ಯಾರೇ ಆಗಿದ್ದರೂ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.


ಮತ್ತಷ್ಟು ಓದಿ :

ಬೆಂಗಳೂರಿನಲ್ಲಿ ದಂಪತಿ ದುರಂತ: ಪತ್ನಿ ಸಾವು, ಬಳಿಕ ಪತಿ ಆತ್ಮಹತ್ಯೆ; ಬೆಳ್ತಂಗಡಿ ಮೂಲದ ವ್ಯಕ್ತಿ

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

1 thought on “ಮಾನಸಿಕ ಅಸ್ವಸ್ಥ ಯುವತಿ ಮೇಲೆ ಅತ್ಯಾಚಾರ ಪ್ರಕರಣ; 7 ಮಂದಿ ಬಂಧನ”

Leave a Comment