---Advertisement---

ಪುತ್ತೂರಿನ ಹಲವು ಪ್ರದೇಶಗಳಲ್ಲಿ ಜೂನ್ 11ರಂದು ವಿದ್ಯುತ್ ವ್ಯತ್ಯಯ

drusti news logo
On: June 25, 2026
ಪುತ್ತೂರಿನ ವಿವಿಧ ಪ್ರದೇಶಗಳಲ್ಲಿ ಜೂನ್ 11ರಂದು ನಿರ್ವಹಣಾ ಕಾಮಗಾರಿಯಿಂದ ವಿದ್ಯುತ್ ವ್ಯತ್ಯಯ ಉಂಟಾಗುವ ಕುರಿತು ಮೆಸ್ಕಾಂ ಮಾಹಿತಿ
---Advertisement---

ಪುತ್ತೂರು : ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ 110/33/11 ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯ ಪುತ್ತೂರು ಟೌನ್ ಓಲ್ಡ್ ಫೀಡರ್‌ನಲ್ಲಿ ಜೂನ್ 11ರಂದು (ಗುರುವಾರ) ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಕಾರಣದಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯದಿಂದ ಕೋರ್ಟ್ ರಸ್ತೆ, ಮಿನಿ ವಿಧಾನ ಸೌಧ, ಚೇತನಾ ಆಸ್ಪತ್ರೆ, ಪರ್ಲಡ್ಕ, ಬೈಪಾಸ್, ಗೋಳಿಕಟ್ಟೆ, ಕುಂಜೂರು ದೇವಸ್ಥಾನ ಪರಿಸರ, ತೆಂಕಿಲ, ಬಪ್ಪಳಿಗೆ, ಬಾಲವನ, ಉರ್ಲಾಂಡಿ, ಸರ್ಕಾರಿ ಆಸ್ಪತ್ರೆ, ಕರ್ಮಲ, ಬೊಳುವಾರು ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳ ನಾಗರಿಕರು ತೊಂದರೆ ಅನುಭವಿಸುವ ಸಾಧ್ಯತೆ ಇದೆ.

ಹೀಗಾಗಿ ಸಂಬಂಧಿತ ಪ್ರದೇಶಗಳ ಸಾರ್ವಜನಿಕರು ಹಾಗೂ ವಿದ್ಯುತ್ ಬಳಕೆದಾರರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮೆಸ್ಕಾಂಗೆ ಸಹಕಾರ ನೀಡುವಂತೆ ಇಲಾಖೆ ಮನವಿ ಮಾಡಿದೆ.

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

1 thought on “ಪುತ್ತೂರಿನ ಹಲವು ಪ್ರದೇಶಗಳಲ್ಲಿ ಜೂನ್ 11ರಂದು ವಿದ್ಯುತ್ ವ್ಯತ್ಯಯ”

Leave a Comment