ಪುತ್ತೂರು : ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯು (Puttur Medical College & Research Hospital) ತನ್ನ ಸಂಸ್ಥೆಯ ಅಧಿಕೃತ ಲೋಗೋ (Logo) ಹಾಗೂ ಟ್ಯಾಗ್‌ಲೈನ್ (Tagline) ವಿನ್ಯಾಸವನ್ನು ಸಾರ್ವಜನಿಕರಿಂದ ಪಡೆಯುವ ನಿರೀಕ್ಷೆಯಲ್ಲಿದೆ.
ಪುತ್ತೂರಿನ ಹೆಮ್ಮೆ ಎಂದೇ ಗುರುತಿಸಿಕೊಂಡಿರುವ ಈ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಅತ್ಯುತ್ತಮ ಲೋಗೋ ಹಾಗೂ ಆಕರ್ಷಕ ಟ್ಯಾಗ್‌ಲೈನ್ ಸಿದ್ಧಪಡಿಸಿ ಕಳುಹಿಸುವಂತೆ ಸಾರ್ವಜನಿಕರಿಗೆ ಕರೆ ನೀಡಲಾಗಿದೆ. ಆಯ್ಕೆಯಾಗುವ ವಿನ್ಯಾಸಗಳಿಗೆ ವಿಶೇಷ ಬಹುಮಾನವನ್ನು ನೀಡಲಾಗುತ್ತದೆ.
ಕಾಲೇಜಿನ ಧ್ಯೇಯ, ಉದ್ದೇಶ ಹಾಗೂ ಸೇವಾ ಮನೋಭಾವವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಲೋಗೋ ಮತ್ತು ಟ್ಯಾಗ್‌ಲೈನ್ ರೂಪಿಸಬೇಕಾಗಿದೆ. ಆಯ್ಕೆಯಾಗುವ ಲೋಗೋ ಹಾಗೂ ಟ್ಯಾಗ್‌ಲೈನ್‌ನ್ನು ಪುತ್ತೂರು ವೈದ್ಯಕೀಯ ಕಾಲೇಜಿನ ಅಧಿಕೃತ ಗುರುತಾಗಿ ಬಳಸಲಾಗುತ್ತದೆ.
ಆಸಕ್ತರು ತಮ್ಮ ವಿನ್ಯಾಸಗಳನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸಬಹುದಾಗಿದೆ.
ಕೊನೆಯ ದಿನಾಂಕ : 20-06-2026
ತಲುಪಿಸ ಬೇಕಾದ ಸ್ಥಳ : ಶಾಸಕರ ಕಚೇರಿ
ಅಥವಾ ಈ ನಂಬರ್ ಗೆ ಕಳುಹಿಸಿ 9900477528
ಪುತ್ತೂರು ವೈದ್ಯಕೀಯ ಕಾಲೇಜಿನ ಗುರುತಿನ ಭಾಗವಾಗುವ ಈ ಅಪರೂಪದ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.
ಮತ್ತಷ್ಟು ಓದಿ :
ಪುತ್ತೂರಿನಲ್ಲಿ ರಸ್ತೆ ಕಾಮಗಾರಿ: ಜೂನ್ 15ರಿಂದ ವಾಹನ ಸಂಚಾರ ಮಾರ್ಗ ಬದಲಾವಣೆ
ಪುತ್ತೂರು : ಆರ್ಯಾಪು ಗ್ರಾಮದ 45 ವರ್ಷದ ವ್ಯಕ್ತಿ ನಾಪತ್ತೆ, ಹುಡುಕಾಟಕ್ಕೆ ಪೊಲೀಸರ ಮನವಿ
















2 thoughts on “ಪುತ್ತೂರು ಮೆಡಿಕಲ್ ಕಾಲೇಜಿನ ಅಧಿಕೃತ ಲೋಗೋ ನಿಮ್ಮದಾಗಬಹುದೇ? ಸಾರ್ವಜನಿಕರಿಗೆ ಸುವರ್ಣಾವಕಾಶ!”