---Advertisement---

ಡೀಸೆಲ್ ಖರೀದಿಗೆ ಹೊಸ ನಿಯಮ : ಕೇಂದ್ರ ಸರ್ಕಾರದ ಮಹತ್ವದ ಕ್ರಮ

drusti news logo
On: June 25, 2026
Fuel station dispensing diesel under new 200 litre daily purchase limit rule in India
---Advertisement---

ದೇಶದಲ್ಲಿ ಡೀಸೆಲ್ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಹಾಗೂ ಇಂಧನದ ಅಕ್ರಮ ದಾಸ್ತಾನು ಮತ್ತು ಕಾಳಸಂತೆ ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಪೆಟ್ರೋಲ್ ಬಂಕ್‌ಗಳಲ್ಲಿ ಒಂದು ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಮಾತ್ರ ಮಾರಾಟ ಮಾಡಲು ಮಿತಿ ವಿಧಿಸಲಾಗಿದೆ.

ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯ ಪ್ರಕಾರ, ವಾಣಿಜ್ಯ, ಕೈಗಾರಿಕಾ ಹಾಗೂ ಸಾಂಸ್ಥಿಕ ಬಳಕೆದಾರರು ಸಾಮಾನ್ಯ ರಿಟೇಲ್ ಪೆಟ್ರೋಲ್ ಬಂಕ್‌ಗಳಿಂದ ಡೀಸೆಲ್ ಖರೀದಿಸಲು ಅವಕಾಶ ಇರುವುದಿಲ್ಲ. ಇಂತಹ ಗ್ರಾಹಕರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ನಿಗದಿಪಡಿಸಲಾದ ವಿಶೇಷ ಮಾರಾಟ ಕೇಂದ್ರಗಳಿಂದಲೇ ಇಂಧನವನ್ನು ಪಡೆಯಬೇಕಾಗಿದೆ.

ಪ್ರಸ್ತುತ ರಿಟೇಲ್ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ದರ ಲೀಟರ್‌ಗೆ ಸುಮಾರು ₹95.20 ಇದ್ದರೆ, ಬೃಹತ್ ಪ್ರಮಾಣದ ಮಾರಾಟ ಕೇಂದ್ರಗಳಲ್ಲಿ ಇದೇ ಡೀಸೆಲ್ ಬೆಲೆ ₹134.50 ಆಗಿದೆ. ಈ ದರದ ವ್ಯತ್ಯಾಸದಿಂದಾಗಿ ಅನೇಕ ದೊಡ್ಡ ವಾಹನಗಳ ಮಾಲೀಕರು ಮತ್ತು ವಾಣಿಜ್ಯ ಗ್ರಾಹಕರು ಸಾಮಾನ್ಯ ಪೆಟ್ರೋಲ್ ಬಂಕ್‌ಗಳತ್ತ ಮುಖ ಮಾಡುತ್ತಿದ್ದರು. ಇದರಿಂದ ರಿಟೇಲ್ ವಲಯದಲ್ಲಿ ಇಂಧನ ಲಭ್ಯತೆ ಮೇಲೆ ಒತ್ತಡ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರ ಹೊಸ ನಿಯಮ ಜಾರಿಗೆ ಮುಂದಾಗಿದೆ.

ಹೊಸ ಸೂಚನೆಯಂತೆ, ರಿಟೇಲ್ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಅನ್ನು ನೇರವಾಗಿ ವಾಹನದ ಇಂಧನ ಟ್ಯಾಂಕ್‌ಗೆ ಮಾತ್ರ ತುಂಬಿಸಬೇಕು. ಸಾಮಾನ್ಯವಾಗಿ ಕ್ಯಾನ್‌, ಬ್ಯಾರೆಲ್‌ ಅಥವಾ ಇತರ ಪಾತ್ರೆಗಳಲ್ಲಿ ಡೀಸೆಲ್ ತುಂಬಿಸಿ ಮಾರಾಟ ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಆದರೆ, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (PESO) ಅನುಮೋದಿಸಿರುವ ವಿಶೇಷ ಕ್ಯಾನ್‌ಗಳಲ್ಲಿ ಮಾತ್ರ ಡೀಸೆಲ್ ಖರೀದಿಸಲು ಅವಕಾಶ ನೀಡಲಾಗಿದೆ.

ಇತ್ತೀಚಿನ ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮತ್ತು ಪೂರೈಕೆ ಒತ್ತಡ ಹೆಚ್ಚಾಗಿದೆ. ಇದರ ಪರಿಣಾಮ ಭಾರತದಲ್ಲಿಯೂ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆಯಲ್ಲಿ ಕೆಲವೊಂದು ವ್ಯತ್ಯಯಗಳು ಕಂಡುಬರುತ್ತಿವೆ. ಈ ಹಿನ್ನೆಲೆ ಸಾಮಾನ್ಯ ಗ್ರಾಹಕರಿಗೆ ರಿಟೇಲ್ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಡೀಸೆಲ್ ಮಾರಾಟಕ್ಕೆ ಮಿತಿ ವಿಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಸರ್ಕಾರದ ಈ ಕ್ರಮದಿಂದ ಇಂಧನ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚುವ ನಿರೀಕ್ಷೆಯಿದ್ದು, ಅಕ್ರಮ ಸಂಗ್ರಹಣೆ ಮತ್ತು ಕಾಳಸಂತೆ ಮಾರಾಟದಂತಹ ಚಟುವಟಿಕೆಗಳನ್ನು ತಡೆಯಲು ಸಹ ನೆರವಾಗಲಿದೆ.

ಮತ್ತಷ್ಟು ಓದಿ :

ಅಮೆರಿಕದ ದಾಳಿಗೆ ಇರಾನ್ ತೀವ್ರ ಆಕ್ಷೇಪ; ಭಾರತೀಯ ನಾವಿಕರ ಸಾವಿಗೆ ಸಂತಾಪ

ಒಮಾನ್ ಸಮುದ್ರದಲ್ಲಿ ಭಾರೀ ಆತಂಕ! ಕಾರವಾರದಿಂದ ತೆರಳಿದ್ದ ತೈಲ ಟ್ಯಾಂಕರ್‌ಗೆ ಬೆಂಕಿ, 24 ಭಾರತೀಯರ ರಕ್ಷಣೆ

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

ಇದನ್ನು ಓದಿ

ಮಂಜೇಶ್ವರದ ಅಪಾಯಕಾರಿ ಸೇತುವೆಯಿಂದ ನದಿಗೆ ಬಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸಿದ ಯುವಕನ ಸಾಹಸ

ಮಂಜೇಶ್ವರದಲ್ಲಿ ಅಪಾಯಕಾರಿ ಸೇತುವೆಯಿಂದ ನದಿಗೆ ಬಿದ್ದ ವಿದ್ಯಾರ್ಥಿನಿ: ಯುವಕನ ಸಾಹಸದಿಂದ ಜೀವ ಉಳಿಯಿತು

ಉಡುಪಿಯಲ್ಲಿ ಎಂ.ಡಿ.ಎಂ.ಎ ಮತ್ತು ಹೈಡ್ರೋ ಗಾಂಜಾ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ ಪೊಲೀಸ್ ಕಾರ್ಯಾಚರಣೆ

ಉಡುಪಿಯಲ್ಲಿ ಮಾದಕವಸ್ತು ಜಾಲಕ್ಕೆ ಪೊಲೀಸರ ದೊಡ್ಡ ಹೊಡೆತ: ಎಂ.ಡಿ.ಎಂ.ಎ, ಹೈಡ್ರೋ ಗಾಂಜಾ ಸಹಿತ ಮೂವರು ಬಂಧನ

ಭಾರತದ ಸಮುದ್ರಾಹಾರ ರಫ್ತು ಹೊಸ ದಾಖಲೆ ನಿರ್ಮಿಸಿ ₹73,890 ಕೋಟಿ ಆದಾಯ ಗಳಿಸಿದ ಮೀನುಗಾರಿಕೆ ಕ್ಷೇತ್ರ

ಭಾರತದ ಸಮುದ್ರಾಹಾರ ರಫ್ತಿಗೆ ಹೊಸ ದಾಖಲೆ : ₹73,890 ಕೋಟಿ ಆದಾಯ, 75ಕ್ಕೂ ಹೆಚ್ಚು ದೇಶಗಳಿಗೆ 19.72 ಲಕ್ಷ ಮೆಟ್ರಿಕ್ ಟನ್ ರಫ್ತು

Airtel 5G ಅನ್‌ಲಿಮಿಟೆಡ್ ಡೇಟಾ ಹಾಟ್‌ಸ್ಪಾಟ್ ಬಳಕೆಯ ಹೊಸ ನಿರ್ಬಂಧದ ಕುರಿತು ಚರ್ಚೆ

Airtel 5G ಬಳಕೆದಾರರಿಗೆ ಶಾಕ್? ಅನ್‌ಲಿಮಿಟೆಡ್ 5G ಡೇಟಾದ ಹಾಟ್‌ಸ್ಪಾಟ್ ಬಳಕೆಗೆ ಹೊಸ ನಿರ್ಬಂಧದ ಚರ್ಚೆ

ಕರ್ನಾಟಕದಲ್ಲಿ ಮತ್ತೆ ಚುರುಕಾದ ಮುಂಗಾರು ಮಳೆ

ಕರ್ನಾಟಕದಲ್ಲಿ ಮತ್ತೆ ಚುರುಕುಗೊಂಡ ಮುಂಗಾರು : ಮುಂದಿನ 7 ದಿನ ರಾಜ್ಯಾದ್ಯಂತ ಮಳೆ ಸಾಧ್ಯತೆ, ಕರಾವಳಿ-ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಕರಾವಳಿಯಲ್ಲಿ ನಾಡದೋಣಿ ಮೀನುಗಾರಿಕೆ ಆರಂಭವಾಗದೆ ಸಮುದ್ರ ತೀರದಲ್ಲಿ ಕಾಯುತ್ತಿರುವ ಮೀನುಗಾರರು

ಕರಾವಳಿಯಲ್ಲಿ ಇನ್ನೂ ಆರಂಭವಾಗದ ನಾಡದೋಣಿ ಮೀನುಗಾರಿಕೆ; ಬದುಕಿನ ಭರವಸೆಯಾದ ‘ಕೈರಂಪಣಿ’ಗಾಗಿ ಕಾಯುತ್ತಿರುವ ಮೀನುಗಾರರು

2 thoughts on “ಡೀಸೆಲ್ ಖರೀದಿಗೆ ಹೊಸ ನಿಯಮ : ಕೇಂದ್ರ ಸರ್ಕಾರದ ಮಹತ್ವದ ಕ್ರಮ”

Leave a Comment