---Advertisement---

ಊಟಿ ಪ್ರವಾಸದ ವೇಳೆ ವೈದ್ಯಕೀಯ ವಿದ್ಯಾರ್ಥಿಗಳ ಅಸ್ವಸ್ಥತೆ

drusti news logo
On: June 25, 2026
ಊಟಿ ಪ್ರವಾಸದ ವೇಳೆ ಅಸ್ವಸ್ಥಗೊಂಡ ವೈದ್ಯಕೀಯ ವಿದ್ಯಾರ್ಥಿಗಳಿಗೆ ಚಿಕಿತ್ಸೆ
---Advertisement---

ಮಂಗಳೂರು/ಊಟಿ : ಮಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಪ್ರವಾಸದ ವೇಳೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಪರಿಣಾಮ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಊಟಿಯಲ್ಲಿ ನಡೆದಿದೆ. ಆಹಾರ ಸೇವನೆಯ ಬಳಿಕ ಕೆಲ ವಿದ್ಯಾರ್ಥಿಗಳಿಗೆ ವಾಂತಿ ಹಾಗೂ ಅತಿಸಾರದ ಲಕ್ಷಣಗಳು ಕಾಣಿಸಿಕೊಂಡಿದ್ದು, ಆಹಾರ ವಿಷಬಾಧೆ ಶಂಕೆ ವ್ಯಕ್ತವಾಗಿದೆ.

ಪ್ರವಾಸಕ್ಕಾಗಿ ಮಂಗಳೂರಿನಿಂದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಊಟಿಗೆ ತೆರಳಿದ್ದರು. ಪ್ರವಾಸದ ಸಂದರ್ಭದಲ್ಲಿ ಕಾಂತಲ್ ಪ್ರದೇಶದಲ್ಲಿ ಆಹಾರ ಸೇವಿಸಿದ ಬಳಿಕ ಅವರು ಊಟಿಯ ಸಮೀಪದ ಎಮರಾಲ್ಡ್ ಪ್ರದೇಶದಲ್ಲಿರುವ ಖಾಸಗಿ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು.

ರಾತ್ರಿ ವೇಳೆ ಕೆಲವು ವಿದ್ಯಾರ್ಥಿಗಳಲ್ಲಿ ಏಕಾಏಕಿ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ವಾಂತಿ ಸೇರಿದಂತೆ ವಿವಿಧ ಆರೋಗ್ಯ ತೊಂದರೆಗಳು ಆರಂಭವಾದವು. ಪರಿಸ್ಥಿತಿ ಗಂಭೀರವಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ತಕ್ಷಣವೇ ಎಮರಾಲ್ಡ್‌ನ(emerald) ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.

ಆದರೆ ಕೆಲವು ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಾಣಿಸದ ಹಿನ್ನೆಲೆಯಲ್ಲಿ 15ಕ್ಕೂ ಹೆಚ್ಚು ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಊಟಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. 108 ಆಂಬುಲೆನ್ಸ್ ಸೇವೆಯ ಮೂಲಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಕೀಯ ತಂಡದಿಂದ ಚಿಕಿತ್ಸೆ ಮುಂದುವರಿದಿದೆ.

ಘಟನೆಯ ನಿಖರ ಕಾರಣದ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದ್ದು, ಎಮರಾಲ್ಡ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

ಇದನ್ನು ಓದಿ

ಮಂಜೇಶ್ವರದ ಅಪಾಯಕಾರಿ ಸೇತುವೆಯಿಂದ ನದಿಗೆ ಬಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸಿದ ಯುವಕನ ಸಾಹಸ

ಮಂಜೇಶ್ವರದಲ್ಲಿ ಅಪಾಯಕಾರಿ ಸೇತುವೆಯಿಂದ ನದಿಗೆ ಬಿದ್ದ ವಿದ್ಯಾರ್ಥಿನಿ: ಯುವಕನ ಸಾಹಸದಿಂದ ಜೀವ ಉಳಿಯಿತು

ಉಡುಪಿಯಲ್ಲಿ ಎಂ.ಡಿ.ಎಂ.ಎ ಮತ್ತು ಹೈಡ್ರೋ ಗಾಂಜಾ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ ಪೊಲೀಸ್ ಕಾರ್ಯಾಚರಣೆ

ಉಡುಪಿಯಲ್ಲಿ ಮಾದಕವಸ್ತು ಜಾಲಕ್ಕೆ ಪೊಲೀಸರ ದೊಡ್ಡ ಹೊಡೆತ: ಎಂ.ಡಿ.ಎಂ.ಎ, ಹೈಡ್ರೋ ಗಾಂಜಾ ಸಹಿತ ಮೂವರು ಬಂಧನ

ಭಾರತದ ಸಮುದ್ರಾಹಾರ ರಫ್ತು ಹೊಸ ದಾಖಲೆ ನಿರ್ಮಿಸಿ ₹73,890 ಕೋಟಿ ಆದಾಯ ಗಳಿಸಿದ ಮೀನುಗಾರಿಕೆ ಕ್ಷೇತ್ರ

ಭಾರತದ ಸಮುದ್ರಾಹಾರ ರಫ್ತಿಗೆ ಹೊಸ ದಾಖಲೆ : ₹73,890 ಕೋಟಿ ಆದಾಯ, 75ಕ್ಕೂ ಹೆಚ್ಚು ದೇಶಗಳಿಗೆ 19.72 ಲಕ್ಷ ಮೆಟ್ರಿಕ್ ಟನ್ ರಫ್ತು

Airtel 5G ಅನ್‌ಲಿಮಿಟೆಡ್ ಡೇಟಾ ಹಾಟ್‌ಸ್ಪಾಟ್ ಬಳಕೆಯ ಹೊಸ ನಿರ್ಬಂಧದ ಕುರಿತು ಚರ್ಚೆ

Airtel 5G ಬಳಕೆದಾರರಿಗೆ ಶಾಕ್? ಅನ್‌ಲಿಮಿಟೆಡ್ 5G ಡೇಟಾದ ಹಾಟ್‌ಸ್ಪಾಟ್ ಬಳಕೆಗೆ ಹೊಸ ನಿರ್ಬಂಧದ ಚರ್ಚೆ

ಕರ್ನಾಟಕದಲ್ಲಿ ಮತ್ತೆ ಚುರುಕಾದ ಮುಂಗಾರು ಮಳೆ

ಕರ್ನಾಟಕದಲ್ಲಿ ಮತ್ತೆ ಚುರುಕುಗೊಂಡ ಮುಂಗಾರು : ಮುಂದಿನ 7 ದಿನ ರಾಜ್ಯಾದ್ಯಂತ ಮಳೆ ಸಾಧ್ಯತೆ, ಕರಾವಳಿ-ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಕರಾವಳಿಯಲ್ಲಿ ನಾಡದೋಣಿ ಮೀನುಗಾರಿಕೆ ಆರಂಭವಾಗದೆ ಸಮುದ್ರ ತೀರದಲ್ಲಿ ಕಾಯುತ್ತಿರುವ ಮೀನುಗಾರರು

ಕರಾವಳಿಯಲ್ಲಿ ಇನ್ನೂ ಆರಂಭವಾಗದ ನಾಡದೋಣಿ ಮೀನುಗಾರಿಕೆ; ಬದುಕಿನ ಭರವಸೆಯಾದ ‘ಕೈರಂಪಣಿ’ಗಾಗಿ ಕಾಯುತ್ತಿರುವ ಮೀನುಗಾರರು