---Advertisement---

ಮಂಗಳೂರು ಎಕ್ಕೂರಿನಲ್ಲಿ ಭೀಕರ ರಸ್ತೆ ಅಪಘಾತ : ಲಾರಿಗೆ ಬೈಕ್ ಡಿಕ್ಕಿ, 26 ವರ್ಷದ ಎಸಿ ಮೆಕ್ಯಾನಿಕ್‌ ಸಾವು

drusti news logo
On: June 25, 2026
Ekkur Road Accident Bike Hits Lorry Youth Dies
---Advertisement---

ಮಂಗಳೂರು, ಜೂನ್ 22: ರಾಷ್ಟ್ರೀಯ ಹೆದ್ದಾರಿ 66ರ ಎಕ್ಕೂರು ರೈಲ್ವೆ ಮೇಲ್ಸೇತುವೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 26 ವರ್ಷದ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ. ಮಂಜೇಶ್ವರ ವರ್ಕಾಡಿ ಪಾತೂರು ನಿವಾಸಿ ಹಾಗೂ ಎಸಿ ಮೆಕ್ಯಾನಿಕ್ ಆಗಿದ್ದ ಸುಧೀಶ್ ಸಿ.ಕೆ. (26) ಮೃತಪಟ್ಟವರು.

ಭಾನುವಾರ ಬೆಳಿಗ್ಗೆ ಮನೆಯಿಂದ ನಗರಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಎಕ್ಕೂರಿನ ರೈಲ್ವೆ ಮೇಲ್ಸೇತುವೆ ಮೇಲೆ ಸಾಗುತ್ತಿದ್ದ ಬೃಹತ್ ಲಾರಿಯ ಹಿಂಭಾಗಕ್ಕೆ ಸುಧೀರ್ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಅಪಘಾತದ ಪರಿಣಾಮ ಸುಧೀರ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು. ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅತಿಯಾದ ರಕ್ತಸ್ರಾವದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಬೈಕ್ ವೇಗವಾಗಿ ಚಲಾಯಿಸುತ್ತಿದ್ದುದೂ ಅಪಘಾತಕ್ಕೆ ಕಾರಣವಾಗಿರಬಹುದೆಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯುವ ವಯಸ್ಸಿನಲ್ಲೇ ಸುಧೀರ್ ಅವರ ಸಾವಿನಿಂದ ಕುಟುಂಬಸ್ಥರು ಮತ್ತು ಸ್ನೇಹಿತರಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಆಲಂಕಾರಿನಲ್ಲಿ ನಿಗೂಢ ದುರಂತ : ಬಾಡಿಗೆ ಮನೆಯಲ್ಲಿ ದಂಪತಿ ಶವವಾಗಿ ಪತ್ತೆ, ಅಳುತ್ತಲೇ ನಿದ್ರೆಗೆ ಜಾರಿದ್ದ ಎರಡು ವರ್ಷದ ಮಗು

ದ್ವಿಗುಣ ಲಾಭದ ಭರವಸೆ ನಂಬಿದ ಹಿರಿಯ ನಾಗರಿಕ; ಟ್ರೇಡಿಂಗ್ ಹೆಸರಿನಲ್ಲಿ ₹4 ಲಕ್ಷ ವಂಚನೆ

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

1 thought on “ಮಂಗಳೂರು ಎಕ್ಕೂರಿನಲ್ಲಿ ಭೀಕರ ರಸ್ತೆ ಅಪಘಾತ : ಲಾರಿಗೆ ಬೈಕ್ ಡಿಕ್ಕಿ, 26 ವರ್ಷದ ಎಸಿ ಮೆಕ್ಯಾನಿಕ್‌ ಸಾವು”

Leave a Comment