ಶಿವಮೊಗ್ಗ: ಜಿಲ್ಲೆಯ ಆಯನೂರು–ಸಿರಿಗೆರೆ ರಸ್ತೆಯ ಹೊಸೂರು ದರ್ಗಾ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಾವಣಗೆರೆ ಮೂಲದ ನಿವೃತ್ತ ಬಿಎಸ್ಎನ್ಎಲ್ ನೌಕರರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ದಾವಣಗೆರೆ ನಿವಾಸಿ ಸುರೇಶ್ (65) ಎಂದು ಗುರುತಿಸಲಾಗಿದೆ. ಅವರು ತಮ್ಮ ಪುತ್ರ ಅಮೃತ್ (36) ಅವರೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಾರುತಿ ಸ್ವಿಫ್ಟ್ ಕಾರಿನಲ್ಲಿ ದಾವಣಗೆರೆಗೆ ಹಿಂದಿರುಗುತ್ತಿದ್ದರು. ಕಾರನ್ನು ಪುತ್ರ ಅಮೃತ್ ಚಾಲನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ನಿಯಂತ್ರಣ ತಪ್ಪಿದ ಕಾರು, ಭೀಕರ ಅಪಘಾತ
ಆಯನೂರು–ಸಿರಿಗೆರೆ ರಸ್ತೆಯ ಹೊಸೂರು ದರ್ಗಾ ಸಮೀಪ ತಲುಪುತ್ತಿದ್ದಂತೆ ಏಕಾಏಕಿ ಕಾರಿನ ನಿಯಂತ್ರಣ ತಪ್ಪಿದೆ. ಪರಿಣಾಮ ರಸ್ತೆ ಬದಿಯಲ್ಲಿದ್ದ ಮೋರಿಗೆ ಕಾರು ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನಕ್ಕೆ ಭಾರೀ ಹಾನಿಯಾಗಿದೆ.
ಸ್ಥಳದಲ್ಲೇ ಸುರೇಶ್ ಸಾವು
ಅಪಘಾತದ ತೀವ್ರತೆಗೆ ಸುರೇಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಲಾಯಿಸುತ್ತಿದ್ದ ಪುತ್ರ ಅಮೃತ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಮಾಹಿತಿ ತಿಳಿದ ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರ ಪರಿಶೀಲನೆ, ತನಿಖೆ ಮುಂದುವರಿಕೆ
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.
ಮತ್ತಷ್ಟು ಓದಿ :
ಬಜಪೆ ಬಳಿ ಭೀಕರ ಅಪಘಾತ: ಬಸ್-ಬೈಕ್ ಡಿಕ್ಕಿ, ಸ್ಥಳದಲ್ಲೇ ಬೈಕ್ ಸವಾರ ಸಾವು – ಪತ್ನಿಗೆ ಗಂಭೀರ ಗಾಯ











1 thought on “ಶಿವಮೊಗ್ಗದಲ್ಲಿ ಭೀಕರ ಕಾರು ಅಪಘಾತ: ಮಂಗಳೂರಿನಿಂದ ಚಿಕಿತ್ಸೆ ಪಡೆದು ಮರಳುತ್ತಿದ್ದ ನಿವೃತ್ತ ಬಿಎಸ್ಎನ್ಎಲ್ ನೌಕರ ದುರ್ಮರಣ”