---Advertisement---

ಕಡಬದಲ್ಲಿ ನಿಲ್ಲಿಸಿದ್ದ ಲಾರಿಯಿಂದ 400 ಲೀಟರ್ ಡೀಸೆಲ್ ಕಳವು – ರಾತ್ರಿ ವೇಳೆ ಕಳ್ಳರ ಕೈಚಳಕ

drusti news logo
On: July 30, 2026
ಕಡಬದ ನೆಲ್ಯಾಡಿಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಯಿಂದ 400 ಲೀಟರ್ ಡೀಸೆಲ್ ಕಳವು ನಡೆದ ದೃಶ್ಯ
---Advertisement---

ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿ ಪೇಟೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಯೊಂದರಿಂದ ಸುಮಾರು 400 ಲೀಟರ್ ಡೀಸೆಲ್ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮಂಗಳೂರು ಕಡೆಯಿಂದ ಬಾಕ್ಸೈಟ್ ತುಂಬಿಕೊಂಡು ಸಾಗುತ್ತಿದ್ದ ಲಾರಿಯ ಚಾಲಕ, ರಾತ್ರಿ ನೆಲ್ಯಾಡಿ ಪೇಟೆಯಲ್ಲಿ ರಸ್ತೆ ಬದಿಯಲ್ಲಿ ವಾಹನವನ್ನು ನಿಲ್ಲಿಸಿ ಮನೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ ಬಂದು ಲಾರಿ ಚಾಲನೆ ಮಾಡಲು ಯತ್ನಿಸಿದಾಗ ಡೀಸೆಲ್ ಸಂಪೂರ್ಣ ಖಾಲಿಯಾಗಿದ್ದರಿಂದ ಲಾರಿ ಸ್ಟಾರ್ಟ್ ಆಗದೆ ರಸ್ತೆಯಲ್ಲೇ ನಿಂತಿದೆ.

ಪರಿಶೀಲನೆ ನಡೆಸಿದ ವೇಳೆ, ಲಾರಿಯ ಟ್ಯಾಂಕ್‌ನಲ್ಲಿದ್ದ 400 ಲೀಟರ್‌ಗೂ ಅಧಿಕ ಡೀಸೆಲ್‌ನ್ನು ಕಳ್ಳರು ಕಳವು ಮಾಡಿ ಪರಾರಿಯಾಗಿರುವುದು ಪತ್ತೆಯಾಗಿದೆ.

ಘಟನೆಗೆ ಸಂಬಂಧಿಸಿ ಕಡಬ/ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.


ಮತ್ತಷ್ಟು ಓದಿ :

ಕಪಿಲಾ ನದಿಯಲ್ಲಿ ಸಿಲುಕಿದ್ದ 73 ವರ್ಷದ ವ್ಯಕ್ತಿಯ ಸಾಹಸಮಯ ರಕ್ಷಣೆ

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

Leave a Comment