---Advertisement---

ಪ್ರೀತಿ ಮುರಿದ ನೋವು ತಾಳಲಾರದೆ 24 ವರ್ಷದ ಯುವಕ ಆತ್ಮಹತ್ಯೆ

drusti news logo
On: July 31, 2026
Karwar Youth Death Suspected Suicide Investigation
---Advertisement---

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಸಮೀಪದ ರಾಮನಗರದಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಪ್ರೇಮ ವೈಫಲ್ಯದಿಂದ ಮನನೊಂದಿದ್ದ ಹಿನ್ನೆಲೆ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಹರೀಶ ಮೇಸ್ತಾ (24) ಎಂದು ಗುರುತಿಸಲಾಗಿದ್ದು, ಅವರು ವೃತ್ತಿಯಲ್ಲಿ ಚಾಲಕರಾಗಿದ್ದರು.

ಪೊಲೀಸರ ಮಾಹಿತಿ ಪ್ರಕಾರ, ಹರೀಶ ಅವರು ತಾವು ಪ್ರೀತಿಸುತ್ತಿದ್ದ ಯುವತಿಯನ್ನು ವಿವಾಹವಾಗುವ ಆಸೆ ಹೊಂದಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವಿನ ಸಂಬಂಧ ಮುರಿದಿದ್ದು, ಇದರಿಂದ ಅವರು ಮಾನಸಿಕವಾಗಿ ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


ಮತ್ತಷ್ಟು ಓದಿ :

ಭಾರಿ ಮಳೆ ಎಫೆಕ್ಟ್: ದಕ್ಷಿಣ ಕನ್ನಡದಲ್ಲಿ ಆಗಸ್ಟ್ 1ರಂದು ಶಾಲೆಗಳಿಗೆ ರಜೆ; ಜಿಲ್ಲಾಧಿಕಾರಿಯಿಂದ ಅಧಿಕೃತ ಆದೇಶ

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

1 thought on “ಪ್ರೀತಿ ಮುರಿದ ನೋವು ತಾಳಲಾರದೆ 24 ವರ್ಷದ ಯುವಕ ಆತ್ಮಹತ್ಯೆ”

Leave a Comment