ಮಂಗಳೂರು: ವಾರ್ಷಿಕ ಮೀನುಗಾರಿಕೆ ನಿಷೇಧ ಅವಧಿ ಮುಕ್ತಾಯವಾದ ಬಳಿಕ ಮಂಗಳೂರು ಕರಾವಳಿಯಲ್ಲಿ ಮೀನುಗಾರಿಕೆ ಚಟುವಟಿಕೆಗಳು ಮತ್ತೆ ಚುರುಕುಗೊಂಡಿವೆ. ಹವಾಮಾನದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡ ಹಿನ್ನೆಲೆಯಲ್ಲಿ ಮಂಗಳೂರಿನ ಹಳೆ ಬಂದರಿನಿಂದ ಸುಮಾರು 100ಕ್ಕೂ ಹೆಚ್ಚು ಟ್ರಾಲ್ ಬೋಟ್ಗಳು ಹೊಸ ನಿರೀಕ್ಷೆಯೊಂದಿಗೆ ಆಳ ಸಮುದ್ರದತ್ತ ಪ್ರಯಾಣ ಬೆಳೆಸಿವೆ.
ಮಂಗಳೂರಿನಲ್ಲಿ ಟ್ರಾಲ್ ಬೋಟ್ಗಳ ಸಮುದ್ರಯಾನ ಆರಂಭ
ಕಳೆದ ಎರಡು ದಿನಗಳಿಂದ ಬಿರುಗಾಳಿ ಹಾಗೂ ಪ್ರಕ್ಷುಬ್ಧ ಸಮುದ್ರದ ಕಾರಣ ಮೀನುಗಾರಿಕೆ ಸ್ಥಗಿತಗೊಂಡಿತ್ತು. ಡೀಸೆಲ್ ಹಾಗೂ ಮಂಜುಗಡ್ಡೆ ತುಂಬಿಸಿಕೊಂಡು ಸಿದ್ಧವಾಗಿದ್ದ ಬೋಟ್ಗಳು ಬಂದರಿನಲ್ಲೇ ಉಳಿದಿದ್ದವು. ಇದೀಗ ಹವಾಮಾನ ಅನುಕೂಲಕರವಾಗುತ್ತಿದ್ದಂತೆ ಅಳಿವೆ ಬಾಗಿಲು ಮೂಲಕ ಒಂದೊಂದಾಗಿ ಟ್ರಾಲ್ ಬೋಟ್ಗಳು ಸಮುದ್ರಕ್ಕಿಳಿದಿವೆ.
ಮೀನುಗಾರರ ಮಾಹಿತಿ ಪ್ರಕಾರ, ಈ ಬಾರಿ ಉತ್ತಮ ಮೀನು ಸಂಪತ್ತು ದೊರೆಯುವ ನಿರೀಕ್ಷೆಯಿದ್ದು, ಸಮುದ್ರಕ್ಕೆ ತೆರಳಿರುವ ಬೋಟ್ಗಳು ಸುಮಾರು 10 ದಿನಗಳ ಬಳಿಕ ಬಂದರಿಗೆ ಮರಳುವ ಸಾಧ್ಯತೆ ಇದೆ. ಮೊದಲ ಹಂತದ ಮೀನುಗಾರಿಕೆಯ ಫಲಿತಾಂಶವನ್ನು ಆಧರಿಸಿ ಇನ್ನಷ್ಟು ಬೋಟ್ಗಳು ಸಮುದ್ರಕ್ಕಿಳಿಯಲಿವೆ.
ಮಲ್ಪೆಯಲ್ಲಿ ಇನ್ನೂ ಪ್ರಕ್ಷುಬ್ಧ ಸಮುದ್ರ; ಬೋಟ್ಗಳು ಬಂದರಲ್ಲೇ
ಇನ್ನೊಂದೆಡೆ, ಸರ್ಕಾರ ಯಾಂತ್ರಿಕ ಮೀನುಗಾರಿಕೆಗೆ ಅನುಮತಿ ನೀಡಿದ್ದರೂ ಮಲ್ಪೆ ಬಂದರಿನಲ್ಲಿ ಯಾವುದೇ ಬೋಟ್ಗಳು ಇನ್ನೂ ಸಮುದ್ರಕ್ಕಿಳಿದಿಲ್ಲ. ಬಲವಾದ ಗಾಳಿ ಹಾಗೂ ಆಳ ಸಮುದ್ರದಲ್ಲಿ ಎತ್ತರದ ಅಲೆಗಳು ಮುಂದುವರಿದಿರುವುದರಿಂದ ಮೀನುಗಾರಿಕೆಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಿಲ್ಲ.
ಮತ್ತಷ್ಟು ಓದಿ :
Fixed Deposit ನಿಯಮಗಳಲ್ಲಿ RBI ಮಹತ್ವದ ಬದಲಾವಣೆ, ಠೇವಣಿದಾರರು ತಿಳಿಯಲೇಬೇಕಾದ ವಿಷಯಗಳು











1 thought on “ಆಳ ಸಮುದ್ರ ಮೀನುಗಾರಿಕೆ ಆರಂಭ : ಮಂಗಳೂರಿನಿಂದ ಟ್ರಾಲ್ ಬೋಟ್ಗಳು ಸಮುದ್ರಕ್ಕೆ, ಮಲ್ಪೆಯಲ್ಲಿ ಇನ್ನೂ ಕಾಯುವ ಪರಿಸ್ಥಿತಿ”