---Advertisement---

ಮಡಂತ್ಯಾರು ಸಮೀಪ ಭೀಕರ ರಸ್ತೆ ಅಪಘಾತ : ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸೇರಿ ಇಬ್ಬರ ದುರ್ಮರಣ

drusti news logo
On: June 25, 2026
ಮಡಂತ್ಯಾರು ಸಮೀಪ ಭೀಕರ ರಸ್ತೆ ಅಪಘಾತ: ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸೇರಿ ಇಬ್ಬರ ದುರ್ಮರಣ
---Advertisement---

ಮಡಂತ್ಯಾರು : ಮಚ್ಚಿನ-ಬಳ್ಳಮಂಜ–ಪಣಕಜೆ ರಸ್ತೆಯ ಪಾಲ್ಯರ ಸಮೀಪ ಜೂನ್ 8ರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ ಮಚ್ಚಿನ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರೂ ಸೇರಿದ್ದಾರೆ.

ಮೃತರನ್ನು ಕುತ್ತಿನ ನಿವಾಸಿ ಡಾಕಯ್ಯ ಗೌಡ (60) ಹಾಗೂ ಹೇಂಟ್ರೇಲು ನಿವಾಸಿ, ಮಚ್ಚಿನ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಚಂದಪ್ಪ ಮೂಲ್ಯ (65) ಎಂದು ಗುರುತಿಸಲಾಗಿದೆ. ಇಬ್ಬರೂ ಹುಲ್ಲು ಹಾಗೂ ಕಳೆ ಕತ್ತರಿಸುವ ಕೆಲಸ ನಿರ್ವಹಿಸುತ್ತಿದ್ದು, ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಲಭ್ಯ ಮಾಹಿತಿಯಂತೆ, ಮಡಂತ್ಯಾರು ಮೂಲದ ಶಾಮಿಯಾನ ಅಂಗಡಿಗೆ ಸೇರಿದ ಪಿಕಪ್ ವಾಹನವು ಬಳ್ಳಮಂಜದಿಂದ ಪಣಕಜೆ ಕಡೆಗೆ ಸಾಗುತ್ತಿತ್ತು. ಇದೇ ವೇಳೆ ಪಣಕಜೆಯಿಂದ ಬಳ್ಳಮಂಜದತ್ತ ಡಾಕಯ್ಯ  ಗೌಡ ಚಲಾಯಿಸುತ್ತಿದ್ದ ಸ್ಕೂಟಿ ಬರುತ್ತಿದ್ದು, ಎರಡೂ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದ ಹೊಡೆತದಿಂದ ಸ್ಕೂಟಿಯಲ್ಲಿದ್ದ ಚಂದಪ್ಪ ಮೂಲ್ಯ ಅವರು ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ, ಡಾಕಯ್ಯ ಗೌಡ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.

ಡಾಕಯ್ಯ ಗೌಡ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದು, ಚಂದಪ್ಪ ಮೂಲ್ಯ ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಘಟನೆಯ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

3 thoughts on “ಮಡಂತ್ಯಾರು ಸಮೀಪ ಭೀಕರ ರಸ್ತೆ ಅಪಘಾತ : ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸೇರಿ ಇಬ್ಬರ ದುರ್ಮರಣ”

Leave a Comment