ಸುಳ್ಯ : ಜೂನ್ 12ರಿಂದ 14ರವರೆಗೆ ಸುಳ್ಯದ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಲಿರುವ ಮಾವು ಮತ್ತು ಹಲಸು ಮೇಳದ ಅಂಗವಾಗಿ ಮಹಿಳೆಯರಿಗಾಗಿ ವಿಶೇಷ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಜೂನ್ 14ರಂದು ಮಧ್ಯಾಹ್ನ 3ರಿಂದ 4 ಗಂಟೆಯವರೆಗೆ ನಡೆಯುವ ಈ ಸ್ಪರ್ಧೆಯಲ್ಲಿ ಮಾವು, ಹಲಸು ಹಾಗೂ ಗೇರು ಉತ್ಪನ್ನಗಳನ್ನು ಬಳಸಿ ಅಡುಗೆ ತಯಾರಿಸುವ ಅವಕಾಶವನ್ನು ನೀಡಲಾಗಿದೆ. ಸ್ಥಳೀಯ ಆಹಾರ ಪದಾರ್ಥಗಳ ವೈವಿಧ್ಯತೆ ಹಾಗೂ ಮಹಿಳೆಯರ ಅಡುಗೆ ಪ್ರತಿಭೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿಯಿರುವ ಮಹಿಳೆಯರು ಜೂನ್ 11ರ ಸಂಜೆ ವೇಳೆಗೆ ತಮ್ಮ ಹೆಸರನ್ನು ನೋಂದಾಯಿಸಬೇಕು. ನೋಂದಣಿಗಾಗಿ ಸುಳ್ಯ ರೈತ ಉತ್ಪಾದಕ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಕೊಡಿಯಾಲ ಅವರನ್ನು ಮೊಬೈಲ್ ಸಂಖ್ಯೆ 9740507219 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಮೇಳದ ಸಂಘಟಕರು ತಿಳಿಸಿದ್ದಾರೆ.
ಮಾವು, ಹಲಸು ಮತ್ತು ಗೇರು ಆಧಾರಿತ ಸಾಂಪ್ರದಾಯಿಕ ಹಾಗೂ ನವೀನ ಅಡುಗೆ ಪದಾರ್ಥಗಳಿಗೆ ಈ ಸ್ಪರ್ಧೆಯಲ್ಲಿ ಆದ್ಯತೆ ನೀಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವಂತೆ ಕರೆ ನೀಡಲಾಗಿದೆ.















