ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕಳಂಜ ಗ್ರಾಮದ ಕೋಟೆ ಸಮೀಪದ ಮನೆಯಲ್ಲಿ ರಾತ್ರಿ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಕಾಣಿಸಿಕೊಂಡು, ಮನೆಯ ಮಾಲೀಕರನ್ನು ತಳ್ಳಿ ಸ್ಥಳದಿಂದ ಪರಾರಿಯಾದ ಘಟನೆ ವರದಿಯಾಗಿದೆ.
ಮಾಹಿತಿಯ ಪ್ರಕಾರ, ಕೋಟೆ ಸಮೀಪ ವಾಸಿಸುತ್ತಿರುವ ಗೋಪಿ ಅವರು ಜುಲೈ 1ರಂದು ರಾತ್ರಿ ಮನೆಯ ಬಳಿ ನಾಯಿ ಬೊಗಳುತ್ತಿದ್ದುದನ್ನು ಗಮನಿಸಿ ಟಾರ್ಚ್ ಹಿಡಿದು ಹೊರಗೆ ಬಂದಿದ್ದರು. ಈ ವೇಳೆ ಮನೆಯ ಹಿಂಭಾಗದ ಗುಡ್ಡದ ದಿಕ್ಕಿನಿಂದ ವ್ಯಕ್ತಿಯೊಬ್ಬ ಕೆಳಗಿಳಿದು ಮನೆಯ ಮುಂಭಾಗಕ್ಕೆ ಬಂದಿರುವುದು ಕಂಡುಬಂದಿದೆ.
ಸಂದೇಹಾಸ್ಪದ ವ್ಯಕ್ತಿಯನ್ನು ಪ್ರಶ್ನಿಸಲು ಗೋಪಿ ಅವರು ಮುಂದಾದಾಗ, ಆತ ಅವರನ್ನು ತಳ್ಳಿಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಗೋಪಿ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮತ್ತಷ್ಟು ಓದಿ :
ಶೋರೂಮ್‌ನಿಂದ ಹೊರಬಂದ ಕೆಲವೇ ಗಂಟೆಗಳಲ್ಲಿ ಭೀಕರ ಅಪಘಾತ! ಸುಳ್ಯದಲ್ಲಿ ನೂತನ ಕಾರು ಲಾರಿಗೆ ಡಿಕ್ಕಿ, ಮಹಿಳೆಗೆ ಗಾಯ
ವಿಟ್ಲದಲ್ಲಿ ಹಾವನ್ನು ತಪ್ಪಿಸಲು ಹೋಗಿ ಆಟೋ-ದ್ವಿಚಕ್ರ ವಾಹನ ಡಿಕ್ಕಿ : ಸವಾರನಿಗೆ ಗಂಭೀರ ಗಾಯ
















1 thought on “ಕಳಂಜದಲ್ಲಿ ರಾತ್ರಿ ವೃದ್ಧೆಯ ಮನೆ ಬಳಿ ಅಪರಿಚಿತನ ಸಂಚಾರ; ಪ್ರಶ್ನಿಸಿದ ವೃದ್ಧೆಯನ್ನು ತಳ್ಳಿ ಪರಾರಿ”