ಗುರುವಾಯನಕೆರೆ, ಜೂನ್ 17 : ರಾಷ್ಟ್ರೀಯ ಹೆದ್ದಾರಿಯ ಪಿಲಿಚಂಡಿಕಲ್ಲು ಶಾಲೆ ಸಮೀಪ ಸೋಮವಾರ ಸಂಭವಿಸಿದ ಸರಣಿ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.
ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರು ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಡಿಕ್ಕಿಯ ಪರಿಣಾಮ ಬೈಕ್ ಸವಾರ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ರಭಸಕ್ಕೆ ಒಂದು ಕಾರು ಪಲ್ಟಿಯಾಗಿದ್ದು, ವಾಹನಕ್ಕೆ ಹಾನಿಯಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ನಂತರ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಪಘಾತಕ್ಕೆ ಕಾರಣವಾದ ನಿಖರ ಸಂದರ್ಭಗಳ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಇನ್ನಷ್ಟು ಓದಲು :
ಚಾರ್ಮಾಡಿ ಘಾಟಿಯಲ್ಲಿ ಎಸ್‌ಐಟಿ ಅಧಿಕಾರಿಗಳ ಕಾರು ಪಲ್ಟಿ; ಅಪಾಯದಿಂದ ಪಾರಾದ ನಾಲ್ವರು
ಗಡಾಯಿಕಲ್ಲು ಚಾರಣಕ್ಕೆ ಮತ್ತೆ ಬ್ರೇಕ್: ಜೂನ್ 14ರಿಂದ ನಿಷೇಧ
ವಿವಾಹಿತೆಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ: ಗ್ರಾಮೀಣ ಅಂಚೆ ಸಿಬ್ಬಂದಿ ಬಂಧನ, 14 ದಿನ ನ್ಯಾಯಾಂಗ ವಶ















2 thoughts on “ಗುರುವಾಯನಕೆರೆ ಸಮೀಪ ಸರಣಿ ಅಪಘಾತ: ಬೈಕ್ ಸವಾರ ಗಾಯ, ಕಾರು ಪಲ್ಟಿ”