---Advertisement---

ಬೆಳ್ತಂಗಡಿ : ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಇಬ್ಬರು ಬಾಲಕರ ವಿರುದ್ಧ ಪೋಕ್ಸೋ ಪ್ರಕರಣ

drusti news logo
On: June 25, 2026
ಬೆಳ್ತಂಗಡಿಯಲ್ಲಿ ಅಪ್ರಾಪ್ತೆಯ ಮೇಲಿನ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಪೊಲೀಸ್ ತನಿಖೆ
---Advertisement---

ಬೆಳ್ತಂಗಡಿ, ಜೂನ್ 24 : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಬಾಲಕಿಯ ಪೋಷಕರಿಗೆ ಘಟನೆ ಕುರಿತು ಮಾಹಿತಿ ಲಭಿಸಿದ್ದು, ಬಳಿಕ ಬಾಲಕಿಯನ್ನು ವಿಚಾರಿಸಿದಾಗ ದೌರ್ಜನ್ಯ ನಡೆದಿರುವ ವಿಷಯ ಬೆಳಕಿಗೆ ಬಂದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಪ್ರಕಾರ, ಬಾಲಕಿಯ ಸಂಬಂಧಿಕನಾಗಿರುವ ಒಬ್ಬ ಬಾಲಕ ಹಾಗೂ ಆತನ ಸ್ನೇಹಿತನಾದ ಮತ್ತೋರ್ವ ಬಾಲಕ 2023ರಲ್ಲಿ ಬೆಳ್ತಂಗಡಿ ಸಮೀಪದ ಡ್ಯಾಂ ಪ್ರದೇಶದ ಬಳಿಯ ಕಟ್ಟಡವೊಂದಕ್ಕೆ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಅಲ್ಲದೆ, ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಜೀವ ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿದೆ.

ಜೂನ್ 23ರಂದು ದಾಖಲಾಗಿರುವ ದೂರಿನ ಆಧಾರದ ಮೇಲೆ ವೇಣೂರು ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ 376, 376ಎಬಿ, 376ಡಿಬಿ, 506 ಹಾಗೂ 34ರ ಜೊತೆಗೆ ಪೋಕ್ಸೋ ಕಾಯ್ದೆ-2012ರ ಕಲಂ 6ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ವೇಣೂರು ಪೊಲೀಸರು ಕೈಗೊಂಡಿದ್ದು, ಆರೋಪಗಳಿಗೆ ಸಂಬಂಧಿಸಿದ ಎಲ್ಲಾ ಅಂಶಗಳ ಪರಿಶೀಲನೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಮತ್ತಷ್ಟು ಓದಿ :

ಬೆಳ್ತಂಗಡಿ : ಡಿವೈಡರ್ ಮೇಲೆರಿದ ಕೆಎಸ್‌ಆರ್‌ಟಿಸಿ ಬಸ್

ಗುರುವಾಯನಕೆರೆ ಸಮೀಪ ಸರಣಿ ಅಪಘಾತ: ಬೈಕ್ ಸವಾರ ಗಾಯ, ಕಾರು ಪಲ್ಟಿ

ಚಾರ್ಮಾಡಿ ಘಾಟಿಯಲ್ಲಿ ಎಸ್‌ಐಟಿ ಅಧಿಕಾರಿಗಳ ಕಾರು ಪಲ್ಟಿ; ಅಪಾಯದಿಂದ ಪಾರಾದ ನಾಲ್ವರು

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

1 thought on “ಬೆಳ್ತಂಗಡಿ : ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಇಬ್ಬರು ಬಾಲಕರ ವಿರುದ್ಧ ಪೋಕ್ಸೋ ಪ್ರಕರಣ”

Leave a Comment