ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹನೀಫಾಬಾದ್ ಸಮೀಪ ಅಪ್ರಾಪ್ತ ಬಾಲಕಿಯೊಬ್ಬಳ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಾಹಿದ್ ಎಂಬ ಮುಸ್ಲಿಂ ಯುವಕನನ್ನು ಬಂಧಿಸಿದ್ದಾರೆ.
ಕುಟುಂಬದವರ ದೂರಿನ ಪ್ರಕಾರ, ಶಾಹಿದ್ ಮತ್ತು ಬಾಲಕಿ ಒಂದೇ ಸೂಪರ್ ಮಾರ್ಕೆಟಿನಲ್ಲಿ ಕೆಲಸ ಮಾಡುತ್ತಿದ್ದು ಅಲ್ಲೇ ಶಾಹಿದ್ ಪ್ರೀತಿ ಮಾಡುವಂತೆ ಬಲವಂತ ಮಾಡುತ್ತಿದ ಎನ್ನಲಾಗಿದೆ. ನಂತರ ನಿನ್ನ ಹತ್ತಿರ ಮಾತನಾಡಬೇಕು ಎಂದು ಬಾಲಕಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದಿದ್ದಾನೆ ಎನ್ನಲಾಗಿದೆ. ಘಟನೆ ಬೆಳಕಿಗೆ ಬಂದ ತಕ್ಷಣ ಬಾಲಕಿಯ ಸಂಬಂಧಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೊದಲಿಗೆ ಹಿಂದೂ ಕಾರ್ಯಕರ್ತರು ಕಾರನ್ನ ತಡೆದು ಪೊಲೀಸರಿಗೆ ಸೂಚನೆ ನೀಡಿದ್ದರೂ ಗ್ರಾಮೀಣ ಠಾಣೆ ಪೊಲೀಸರು ಹಿಂದೂ ಕಾರ್ಯಕರ್ತರ ವಿರುದ್ಧನೇ ಕ್ರಮ ಕೈಗೊಂಡಿದ್ದರು.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿರುವ ಪೊಲೀಸರು, ಘಟನೆಯಲ್ಲಿ ಲವ್ ಜಿಹಾದ್ ಪಾತ್ರವಿದೆ ಎಂಬುದು ಹಿಂದೂ ಕಾರ್ಯಕರ್ತರ ವಾದವಾಗಿದೆ.
ಮತ್ತಷ್ಟು ಓದಿ :
ಮಂಗಳೂರು : ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಐವರು ಪೊಲೀಸರ ವಶಕ್ಕೆ
ಉಪ್ಪಿನಂಗಡಿಯಲ್ಲಿ ಮಾದಕ ವಸ್ತು ಜಾಲಕ್ಕೆ ಪೊಲೀಸರ ಬಲೆ; 33 ಗ್ರಾಂ ಗಾಂಜಾ ಸಹಿತ ವ್ಯಕ್ತಿ ಬಂಧನ
ಪ್ರೀತಿಸಿ ವಂಚನೆ ಪ್ರಕರಣ : ಜೂನ್ 19ಕ್ಕೆ ಮಧ್ಯಸ್ಥಿಕೆ ಕೇಂದ್ರದಲ್ಲಿ ರಾಜಿ ಸಂಧಾನ












1 thought on “ಭಟ್ಕಳದಲ್ಲಿ ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣ : ದೌರ್ಜನ್ಯ ಆರೋಪದಡಿ ಯುವಕ ಬಂಧನ”