---Advertisement---

ಮಂಗಳೂರು ಹೆದ್ದಾರಿಯಲ್ಲಿ ಸಿನಿಮೀಯ ಶೈಲಿಯ ದರೋಡೆ… ಉದ್ಯಮಿಯ ಪತ್ನಿ, ಮಗನ ಅಪಹರಣ, 180 ಗ್ರಾಂ ಚಿನ್ನದೊಂದಿಗೆ ಕಾರು ಕಳವು

drusti news logo
On: June 29, 2026
ಪುಂಜಾಲಕಟ್ಟೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದ ಕುರಿತು ಪೊಲೀಸ್ ತನಿಖೆ
---Advertisement---

ಮಂಗಳೂರು, ಜೂ. 29 : ರಾಷ್ಟ್ರೀಯ ಹೆದ್ದಾರಿಯಲ್ಲೇ ಸಿನಿಮೀಯ ರೀತಿಯಲ್ಲಿ ನಡೆದ ದರೋಡೆ ಪ್ರಕರಣವೊಂದು ಮಂಗಳೂರಿನಲ್ಲಿ ಸಂಚಲನ ಮೂಡಿಸಿದೆ. ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ, ಅವರ ಪತ್ನಿ ಮತ್ತು ಮಗನನ್ನು ಅಪಹರಿಸಿ, ಕಾರಿನಲ್ಲಿದ್ದ ಸುಮಾರು 180 ಗ್ರಾಂ ಚಿನ್ನಾಭರಣ ಹಾಗೂ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ಭಾನುವಾರ ಮುಂಜಾನೆ ಬೈಕಂಪಾಡಿಯಲ್ಲಿ ನಡೆದಿದೆ.

ದರೋಡೆಗೆ ಒಳಗಾದವರು ಕೇರಳದ ಪಯ್ಯನ್ನೂರು ನಿವಾಸಿಯಾಗಿರುವ ವಿಕಾಸ್ ಎಂದು ಗುರುತಿಸಲಾಗಿದೆ. ಅವರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜ್ಯುವೆಲ್ಲರಿ ಅಂಗಡಿಯನ್ನು ನಡೆಸುತ್ತಿದ್ದು, ಪತ್ನಿ ಹಾಗೂ ಮಗನೊಂದಿಗೆ ಸ್ವಿಫ್ಟ್ ಕಾರಿನಲ್ಲಿ ಸಾಂಗ್ಲಿಯಿಂದ ಪಯ್ಯನ್ನೂರಿಗೆ ಪ್ರಯಾಣಿಸುತ್ತಿದ್ದರು.

ಜೂನ್ 29ರ ಮುಂಜಾನೆ ಸುಮಾರು 2:15 ಗಂಟೆ ವೇಳೆಗೆ, ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ಜಂಕ್ಷನ್ ಸಮೀಪದ ದ್ವಾರಾ ಹೋಟೆಲ್ ಬಳಿ ತಲುಪುತ್ತಿದ್ದಂತೆ, ಇನ್ನೋವಾ ಕಾರಿನಲ್ಲಿ ಬಂದಿದ್ದ ಸುಮಾರು ಏಳು ಮಂದಿ ದುಷ್ಕರ್ಮಿಗಳ ತಂಡ ವಿಕಾಸ್ ಅವರ ಕಾರನ್ನು ಅಡ್ಡಗಟ್ಟಿದೆ. ಬಳಿಕ ಬಲವಂತವಾಗಿ ವಿಕಾಸ್ ಅವರನ್ನು ಕಾರಿನಿಂದ ಕೆಳಗಿಳಿಸಿದ ಆರೋಪಿಗಳು, ಅವರ ಪತ್ನಿ ಮತ್ತು ಮಗ ಇದ್ದ ಕಾರನ್ನೇ ತಮ್ಮ ವಶಕ್ಕೆ ಪಡೆದು ಸ್ಥಳದಿಂದ ಪರಾರಿಯಾಗಿದ್ದಾರೆ.

ನಂತರ ಪಣಂಬೂರು ಬೀಚ್ ರಸ್ತೆಯ ಕಡೆಗೆ ಕಾರನ್ನು ಚಲಾಯಿಸಿಕೊಂಡು ಹೋದ ದುಷ್ಕರ್ಮಿಗಳು, ಕಾರಿನಲ್ಲಿದ್ದ 180 ಗ್ರಾಂ ಚಿನ್ನಾಭರಣವನ್ನು ದೋಚಿದ್ದಾರೆ. ಆದರೆ, ವಿಕಾಸ್ ಅವರ ಪತ್ನಿ ಧರಿಸಿದ್ದ ಚಿನ್ನದ ಸರವನ್ನು ಮಾತ್ರ ಅವರು ಕಸಿದುಕೊಂಡಿಲ್ಲ ಎನ್ನಲಾಗಿದೆ.

ಚಿನ್ನಾಭರಣವನ್ನು ದೋಚಿದ ಬಳಿಕ, ಮಹಿಳೆ ಮತ್ತು ಮಗನನ್ನು ರಸ್ತೆಯ ಬದಿಯಲ್ಲಿ ಸುರಕ್ಷಿತವಾಗಿ ಬಿಟ್ಟು, ಆರೋಪಿಗಳು ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಈ ಘಟನೆ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಘಟನೆಯ ಕುರಿತು ಮಹತ್ವದ ಸುಳಿವುಗಳು ಪೊಲೀಸರಿಗೆ ಲಭ್ಯವಾಗಿದ್ದು, ಆರೋಪಿಗಳನ್ನು ಬಂಧಿಸುವುದು ಹಾಗೂ ಕಳುವಾದ ಕಾರು ಮತ್ತು ಚಿನ್ನಾಭರಣವನ್ನು ವಶಪಡಿಸಿಕೊಳ್ಳಲು ವಿಶೇಷ ಪೊಲೀಸ್ ತಂಡಗಳು ತೀವ್ರ ಕಾರ್ಯಾಚರಣೆ ನಡೆಸುತ್ತಿವೆ.


ಮತ್ತಷ್ಟು ಓದಿ :

OLXನಲ್ಲಿ ಬೈಕ್ ಮಾರಾಟದ ಆಮಿಷ : ₹5.58 ಲಕ್ಷ ಕಳೆದುಕೊಂಡ ಮಂಗಳೂರಿನ ವ್ಯಕ್ತಿ

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

ಇದನ್ನು ಓದಿ

ಮಂಗಳೂರಿನಲ್ಲಿ ಮಲೇರಿಯಾ ಪ್ರಕರಣಗಳ ಏರಿಕೆ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ತಪಾಸಣೆ

ಮಂಗಳೂರಿನಲ್ಲಿ ಮಲೇರಿಯಾ ಪ್ರಕರಣಗಳ ಏರಿಕೆ; 30ಕ್ಕೂ ಹೆಚ್ಚು ಪ್ರಕರಣ ದೃಢ, ಹೊರರಾಜ್ಯ ಕಾರ್ಮಿಕರ ಮೇಲೆ ವಿಶೇಷ ನಿಗಾ

Deep Sea Fishing Begins Mangaluru Trawl Boats Weather Update

ಆಳ ಸಮುದ್ರ ಮೀನುಗಾರಿಕೆ ಆರಂಭ : ಮಂಗಳೂರಿನಿಂದ ಟ್ರಾಲ್ ಬೋಟ್‌ಗಳು ಸಮುದ್ರಕ್ಕೆ, ಮಲ್ಪೆಯಲ್ಲಿ ಇನ್ನೂ ಕಾಯುವ ಪರಿಸ್ಥಿತಿ

ಉಳ್ಳಾಲದಲ್ಲಿ ಬಾಡಿಗೆ ಮನೆ ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನಾಭರಣ ದರೋಡೆ

ಆಸ್ಪತ್ರೆಯಲ್ಲಿ ಮೃತಪಟ್ಟ ಮಹಿಳೆಯ ಕುತ್ತಿಗೆಯಲ್ಲಿದ್ದ 32 ಗ್ರಾಂ ಚಿನ್ನದ ಕರಿಮಣಿ ನಾಪತ್ತೆ; ಪೊಲೀಸರಿಗೆ ದೂರು

ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ₹31 ಲಕ್ಷ ಸೈಬರ್ ವಂಚನೆ

ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ₹31 ಲಕ್ಷ ಸೈಬರ್ ವಂಚನೆ: ಹಿರಿಯ ನಾಗರಿಕನಿಗೆ ಬೆದರಿಸಿ ಹಣ ದೋಚಿದ ಖದೀಮರು

ಮಂಗಳೂರಿನಲ್ಲಿ ಸೈಬರ್ ವಂಚನೆಗೆ ಬ್ಯಾಂಕ್ ಖಾತೆ ದುರ್ಬಳಕೆ ಪ್ರಕರಣ

ಮಂಗಳೂರಿನಲ್ಲಿ ಸೈಬರ್ ವಂಚನೆಗೆ ಬ್ಯಾಂಕ್ ಖಾತೆ ದುರ್ಬಳಕೆ ಆರೋಪ: ಸ್ನೇಹಿತನ ವಿರುದ್ಧ ಯುವಕನ ದೂರು

ಮಂಗಳೂರಿನಲ್ಲಿ ಪತ್ತೆಯಾದ ಬಿಪಿಎಲ್ ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣ

ಮಂಗಳೂರಿನಲ್ಲಿ ಬಿಪಿಎಲ್ ಪಡಿತರ ಅಕ್ಕಿ ಅಕ್ರಮ ಸಾಗಾಟ ಪತ್ತೆ: 248 ಕೆ.ಜಿ. ಅಕ್ಕಿ ವಶ, ಓರ್ವ ಆರೋಪಿ ಬಂಧನ

2 thoughts on “ಮಂಗಳೂರು ಹೆದ್ದಾರಿಯಲ್ಲಿ ಸಿನಿಮೀಯ ಶೈಲಿಯ ದರೋಡೆ… ಉದ್ಯಮಿಯ ಪತ್ನಿ, ಮಗನ ಅಪಹರಣ, 180 ಗ್ರಾಂ ಚಿನ್ನದೊಂದಿಗೆ ಕಾರು ಕಳವು”

Leave a Comment