---Advertisement---

ಬೈಕಂಪಾಡಿ ಹೆದ್ದಾರಿ ದರೋಡೆ ಪ್ರಕರಣ: ಮೂವರು ಬಂಧನ, ಉಳಿದ 13 ಆರೋಪಿಗಳಿಗಾಗಿ ತೀವ್ರ ಶೋಧ

drusti news logo
On: July 6, 2026
Baikampady Highway Robbery Case Three Arrested
---Advertisement---

ಮಂಗಳೂರು : ಮಂಗಳೂರು ನಗರದ ಬೈಕಂಪಾಡಿ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜೂನ್ 29ರಂದು ನಡೆದ ದರೋಡೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ವಿಶೇಷ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ.

ಮಹಾರಾಷ್ಟ್ರದಿಂದ ಕೇರಳದ ಪಯ್ಯನ್ನೂರಿಗೆ ಪತ್ನಿ ಹಾಗೂ ಪುತ್ರನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಚಿನ್ನದ ವ್ಯಾಪಾರಿ ವಿಕಾಸ್ ಸುಬ್ಬರಾವ್ ಧನವಾಡೆ (44) ಅವರನ್ನು ಮುಂಜಾನೆ ದುಷ್ಕರ್ಮಿಗಳು ಹಲವು ವಾಹನಗಳಲ್ಲಿ ಅಡ್ಡಗಟ್ಟಿ, ಮಾರಕಾಸ್ತ್ರ ತೋರಿಸಿ ಹಲ್ಲೆ ನಡೆಸಿದ್ದರು. ಬಳಿಕ ಅವರ ಪತ್ನಿ ಮತ್ತು ಪುತ್ರನನ್ನು ಕುಳೂರು ಸಮೀಪ ಬಿಟ್ಟು ಪರಾರಿಯಾಗಿದ್ದರು.

ದರೋಡೆಕೋರರು ಕಾರಿನಲ್ಲಿದ್ದ ಸುಮಾರು 180 ಗ್ರಾಂ ಚಿನ್ನ, ಎರಡು ಮೊಬೈಲ್ ಫೋನ್ ಹಾಗೂ ಕಾರನ್ನು ದೋಚಿಕೊಂಡು ಪರಾರಿಯಾಗಿದ್ದು, ಒಟ್ಟು ನಷ್ಟದ ಮೌಲ್ಯ ಸುಮಾರು ₹23.1 ಲಕ್ಷ ಎಂದು ಅಂದಾಜಿಸಲಾಗಿದೆ.

ತನಿಖೆ ವೇಳೆ ಪಣಂಬೂರು ಪೊಲೀಸರು ಬಂಟ್ವಾಳ ತಾಲ್ಲೂಕಿನಲ್ಲಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಣ್ಣೂರಿನ ನಿಮಿಲ್ ಆರ್.ಕೆ. (37), ಕೊಡಗಿನ ಇರ್ಷಾದ್ (40) ಹಾಗೂ ಮಡಿಕೇರಿಯ ಮುಸ್ತಫಾ (49) ಅವರನ್ನು ಬಂಧಿಸಲಾಗಿದೆ. ಬಂಧಿತರಿಗೆ 10 ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದ್ದು, ಉಳಿದ 13 ಆರೋಪಿಗಳಿಗಾಗಿ ಕೇರಳ ಹಾಗೂ ಕೊಡಗು ಭಾಗಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ.


ಮತ್ತಷ್ಟು ಓದಿ

ಮಂಗಳೂರು ಹೆದ್ದಾರಿಯಲ್ಲಿ ಸಿನಿಮೀಯ ಶೈಲಿಯ ದರೋಡೆ… ಉದ್ಯಮಿಯ ಪತ್ನಿ, ಮಗನ ಅಪಹರಣ, 180 ಗ್ರಾಂ ಚಿನ್ನದೊಂದಿಗೆ ಕಾರು ಕಳವು

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

ಇದನ್ನು ಓದಿ

ಮಂಗಳೂರಿನಲ್ಲಿ ಮಲೇರಿಯಾ ಪ್ರಕರಣಗಳ ಏರಿಕೆ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ತಪಾಸಣೆ

ಮಂಗಳೂರಿನಲ್ಲಿ ಮಲೇರಿಯಾ ಪ್ರಕರಣಗಳ ಏರಿಕೆ; 30ಕ್ಕೂ ಹೆಚ್ಚು ಪ್ರಕರಣ ದೃಢ, ಹೊರರಾಜ್ಯ ಕಾರ್ಮಿಕರ ಮೇಲೆ ವಿಶೇಷ ನಿಗಾ

Deep Sea Fishing Begins Mangaluru Trawl Boats Weather Update

ಆಳ ಸಮುದ್ರ ಮೀನುಗಾರಿಕೆ ಆರಂಭ : ಮಂಗಳೂರಿನಿಂದ ಟ್ರಾಲ್ ಬೋಟ್‌ಗಳು ಸಮುದ್ರಕ್ಕೆ, ಮಲ್ಪೆಯಲ್ಲಿ ಇನ್ನೂ ಕಾಯುವ ಪರಿಸ್ಥಿತಿ

ಉಳ್ಳಾಲದಲ್ಲಿ ಬಾಡಿಗೆ ಮನೆ ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನಾಭರಣ ದರೋಡೆ

ಆಸ್ಪತ್ರೆಯಲ್ಲಿ ಮೃತಪಟ್ಟ ಮಹಿಳೆಯ ಕುತ್ತಿಗೆಯಲ್ಲಿದ್ದ 32 ಗ್ರಾಂ ಚಿನ್ನದ ಕರಿಮಣಿ ನಾಪತ್ತೆ; ಪೊಲೀಸರಿಗೆ ದೂರು

ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ₹31 ಲಕ್ಷ ಸೈಬರ್ ವಂಚನೆ

ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ₹31 ಲಕ್ಷ ಸೈಬರ್ ವಂಚನೆ: ಹಿರಿಯ ನಾಗರಿಕನಿಗೆ ಬೆದರಿಸಿ ಹಣ ದೋಚಿದ ಖದೀಮರು

ಮಂಗಳೂರಿನಲ್ಲಿ ಸೈಬರ್ ವಂಚನೆಗೆ ಬ್ಯಾಂಕ್ ಖಾತೆ ದುರ್ಬಳಕೆ ಪ್ರಕರಣ

ಮಂಗಳೂರಿನಲ್ಲಿ ಸೈಬರ್ ವಂಚನೆಗೆ ಬ್ಯಾಂಕ್ ಖಾತೆ ದುರ್ಬಳಕೆ ಆರೋಪ: ಸ್ನೇಹಿತನ ವಿರುದ್ಧ ಯುವಕನ ದೂರು

ಮಂಗಳೂರಿನಲ್ಲಿ ಪತ್ತೆಯಾದ ಬಿಪಿಎಲ್ ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣ

ಮಂಗಳೂರಿನಲ್ಲಿ ಬಿಪಿಎಲ್ ಪಡಿತರ ಅಕ್ಕಿ ಅಕ್ರಮ ಸಾಗಾಟ ಪತ್ತೆ: 248 ಕೆ.ಜಿ. ಅಕ್ಕಿ ವಶ, ಓರ್ವ ಆರೋಪಿ ಬಂಧನ

1 thought on “ಬೈಕಂಪಾಡಿ ಹೆದ್ದಾರಿ ದರೋಡೆ ಪ್ರಕರಣ: ಮೂವರು ಬಂಧನ, ಉಳಿದ 13 ಆರೋಪಿಗಳಿಗಾಗಿ ತೀವ್ರ ಶೋಧ”

Leave a Comment