---Advertisement---

ಐಫೋನ್ ಆರ್ಡರ್ ಮಾಡಿದ ಗ್ರಾಹಕನಿಗೆ ಬಂದಿದ್ದು ಬಿಯರ್ಡ್ ಆಯಿಲ್! ₹1.11 ಲಕ್ಷ ಮರುಪಾವತಿಗೆ ಫ್ಲಿಪ್‌ಕಾರ್ಟ್‌ಗೆ ನ್ಯಾಯಾಲಯದ ಆದೇಶ

drusti news logo
On: July 24, 2026
ಐಫೋನ್ 14 ಪ್ರೋ ಬದಲಿಗೆ ಬಿಯರ್ಡ್ ಆಯಿಲ್ ಡೆಲಿವರಿ ಪ್ರಕರಣದಲ್ಲಿ ಫ್ಲಿಪ್‌ಕಾರ್ಟ್‌ಗೆ ಮರುಪಾವತಿ ಆದೇಶ
---Advertisement---

ಮುಂಬೈ: ಆನ್‌ಲೈನ್‌ನಲ್ಲಿ ₹1.11 ಲಕ್ಷ ಮೌಲ್ಯದ ಆಪಲ್ ಐಫೋನ್ 14 ಪ್ರೋ ಆರ್ಡರ್ ಮಾಡಿದ ಗ್ರಾಹಕರಿಗೆ ಮೊಬೈಲ್ ಬದಲಾಗಿ ‘ಬಿಯರ್ಡ್ ಗ್ರೋತ್ ಆಯಿಲ್’ (Beard Growth Oil) ಬಾಟಲಿ ತಲುಪಿದ ಪ್ರಕರಣದಲ್ಲಿ, ಮುಂಬೈ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ತೀರ್ಪು ನೀಡಿದೆ.

ಆಯೋಗವು ಫ್ಲಿಪ್‌ಕಾರ್ಟ್ ಹಾಗೂ ಸಂಬಂಧಿತ ಮಾರಾಟಗಾರ ಸಂಸ್ಥೆಗೆ ಗ್ರಾಹಕರಿಗೆ ₹1.11 ಲಕ್ಷ ಮೂಲ ಮೊತ್ತವನ್ನು ಬಡ್ಡಿ ಸಮೇತ ಮರುಪಾವತಿಸಬೇಕು ಹಾಗೂ ₹70,000 ಪರಿಹಾರ ನೀಡುವಂತೆ ಆದೇಶಿಸಿದೆ.

ಪ್ರಕರಣದ ವಿವರಗಳ ಪ್ರಕಾರ, ಮುಂಬೈನ ಪೊವೈ ನಿವಾಸಿಯೊಬ್ಬರು 2023ರ ಏಪ್ರಿಲ್‌ನಲ್ಲಿ ಫ್ಲಿಪ್‌ಕಾರ್ಟ್ ಮೂಲಕ ₹1,11,793 ಮೌಲ್ಯದ iPhone 14 Pro ಅನ್ನು ಆರ್ಡರ್ ಮಾಡಿದ್ದರು.

ಆರ್ಡರ್‌ನಲ್ಲಿದ್ದ ಮೊಬೈಲ್ ಚಾರ್ಜರ್ ಹಾಗೂ ಕವರ್ ಸರಿಯಾಗಿ ತಲುಪಿದ್ದರೂ, ಮರುದಿನ ಬಂದ ಮುಖ್ಯ ಪಾರ್ಸೆಲ್‌ನಲ್ಲಿ ಐಫೋನ್ ಬದಲಿಗೆ ಬಿಯರ್ಡ್ ಗ್ರೋತ್ ಆಯಿಲ್ ಬಾಟಲಿ ಇತ್ತು. ಇದರಿಂದ ಗ್ರಾಹಕರು ಅಚ್ಚರಿಗೆ ಒಳಗಾಗಿದ್ದರು.

ಘಟನೆ ಬಳಿಕ ಗ್ರಾಹಕರು ತಕ್ಷಣವೇ ಫ್ಲಿಪ್‌ಕಾರ್ಟ್ ಕಸ್ಟಮರ್ ಸಪೋರ್ಟ್‌ಗೆ ದೂರು ನೀಡಿ, ಅಗತ್ಯ ದಾಖಲೆಗಳು ಹಾಗೂ ವಿವರಗಳನ್ನು ಸಲ್ಲಿಸಿದ್ದರು.

ಆದರೆ, ಸಮಸ್ಯೆಗೆ ಪರಿಹಾರ ನೀಡುವ ಬದಲು, ಯಾವುದೇ ಹಣ ಮರುಪಾವತಿ ಅಥವಾ ಬದಲಿ ಮೊಬೈಲ್ ನೀಡದೇ, ದೂರುವನ್ನು ‘Resolved’ (ಪರಿಹರಿಸಲಾಗಿದೆ) ಎಂದು ತೋರಿಸಿ ಮುಚ್ಚಲಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಇದರಿಂದ ಬೇಸತ್ತ ಗ್ರಾಹಕರು ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮುಂಬೈ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಗ್ರಾಹಕರ ದೂರುಗಳಿಗೆ ಸಮರ್ಪಕ ಪರಿಹಾರ ನೀಡದೇ ಪದೇಪದೇ ಮುಚ್ಚಿರುವುದು “ಅನ್ಯಾಯ ವ್ಯವಹಾರ ಪದ್ಧತಿ” ಹಾಗೂ “ಸೇವೆಯಲ್ಲಿನ ಕೊರತೆ” ಎಂದು ಅಭಿಪ್ರಾಯಪಟ್ಟಿದೆ.

ಫ್ಲಿಪ್‌ಕಾರ್ಟ್ ತನ್ನ ವೇದಿಕೆಯ ಮೂಲಕ ಹಣ ಪಡೆದು ಸರಕು ಮಾರಾಟ ಮಾಡುವ ಅವಕಾಶ ಕಲ್ಪಿಸಿರುವುದರಿಂದ, ಜವಾಬ್ದಾರಿಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಆಯೋಗದ ಆದೇಶದಂತೆ, ಫ್ಲಿಪ್‌ಕಾರ್ಟ್ ಹಾಗೂ ಮಾರಾಟಗಾರ ಸಂಸ್ಥೆಯಾದ ಇಂಟರ್‌ನ್ಯಾಷನಲ್ ವ್ಯಾಲ್ಯೂ ರಿಟೇಲ್ ಪ್ರೈವೇಟ್ ಲಿಮಿಟೆಡ್ ಜಂಟಿಯಾಗಿ ಗ್ರಾಹಕರಿಗೆ ಕೆಳಕಂಡಂತೆ ಪರಿಹಾರ ನೀಡಬೇಕು.

  • ₹1,11,793 ಮೂಲ ಮೊತ್ತವನ್ನು 2023ರ ಏಪ್ರಿಲ್ 22ರಿಂದ ವಾರ್ಷಿಕ ಶೇ.9 ಬಡ್ಡಿಯೊಂದಿಗೆ ಮರುಪಾವತಿಸಬೇಕು.
  • ಮಾನಸಿಕ ಹಿಂಸೆ ಹಾಗೂ ತೊಂದರೆಗೆ ₹50,000 ಪರಿಹಾರ ನೀಡಬೇಕು.
  • ಕಾನೂನು ಹೋರಾಟದ ವೆಚ್ಚಕ್ಕಾಗಿ ₹20,000 ಪಾವತಿಸಬೇಕು.

ಒಟ್ಟು ಪರಿಹಾರದ ಮೊತ್ತವನ್ನು 45 ದಿನಗಳೊಳಗೆ ಗ್ರಾಹಕರಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.


ಮತ್ತಷ್ಟು ಓದಿ :

ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ₹31 ಲಕ್ಷ ಸೈಬರ್ ವಂಚನೆ: ಹಿರಿಯ ನಾಗರಿಕನಿಗೆ ಬೆದರಿಸಿ ಹಣ ದೋಚಿದ ಖದೀಮರು

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

2 thoughts on “ಐಫೋನ್ ಆರ್ಡರ್ ಮಾಡಿದ ಗ್ರಾಹಕನಿಗೆ ಬಂದಿದ್ದು ಬಿಯರ್ಡ್ ಆಯಿಲ್! ₹1.11 ಲಕ್ಷ ಮರುಪಾವತಿಗೆ ಫ್ಲಿಪ್‌ಕಾರ್ಟ್‌ಗೆ ನ್ಯಾಯಾಲಯದ ಆದೇಶ”

Leave a Comment