---Advertisement---

ಲಾವಣ್ಯ ಕೊಲೆ ಪ್ರಕರಣ: ಕೊಲೆಗೆ ಬಳಸಿದ ಕತ್ತಿ ಖರೀದಿಸಿದ್ದ ಅಂಗಡಿಯಲ್ಲಿ ಆರೋಪಿ ಚೇತನ್‌ನಿಂದ ಮಹಜರು

drusti news logo
On: July 30, 2026
ಲಾವಣ್ಯ ಕೊಲೆ ಪ್ರಕರಣದಲ್ಲಿ ಕತ್ತಿ ಖರೀದಿಸಿದ ಉಪ್ಪಿನಂಗಡಿಯ ಅಂಗಡಿಯಲ್ಲಿ ಆರೋಪಿ ಚೇತನ್‌ನಿಂದ ಪೊಲೀಸರು ಮಹಜರು ನಡೆಸಿದ ದೃಶ್ಯ
---Advertisement---

ಉಪ್ಪಿನಂಗಡಿ: ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯ ಅವರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದ ತನಿಖೆ ಮುಂದುವರಿದಿದ್ದು, ಕೊಲೆಗೆ ಬಳಸಿದ್ದ ಕತ್ತಿಯನ್ನು ಖರೀದಿಸಿದ್ದ ಉಪ್ಪಿನಂಗಡಿಯ ಅಂಗಡಿಯಲ್ಲಿ ಬುಧವಾರ ಪೊಲೀಸರು ಆರೋಪಿ ಚೇತನ್‌ನಿಂದ ಮಹಜರು (Spot Mahazar) ನಡೆಸಿದರು.

ಆರೋಪಿಯ ಮುಖವನ್ನು ಕಪ್ಪು ಬಟ್ಟೆಯಿಂದ ಮುಚ್ಚಿ ಸ್ಥಳಕ್ಕೆ ಕರೆತಂದ ತನಿಖಾಧಿಕಾರಿಗಳು, ಕತ್ತಿ ಖರೀದಿಸಿದ ಸ್ಥಳದಲ್ಲಿ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದರು. ಕೃಷಿ ಸಲಕರಣೆಗಳ ಅಂಗಡಿಯ ಸಿಬ್ಬಂದಿಯೂ ತನಿಖೆಗೆ ಅಗತ್ಯ ಸಹಕಾರ ನೀಡಿದರು.

ಪ್ರಾಥಮಿಕ ತನಿಖೆಯ ಪ್ರಕಾರ, ತನ್ನ ಏಕಪಕ್ಷೀಯ ಪ್ರೀತಿಯನ್ನು ಲಾವಣ್ಯ ಒಪ್ಪದ ಹಿನ್ನೆಲೆಯಲ್ಲಿ ಚೇತನ್ ಕೊಲೆಯನ್ನು ಪೂರ್ವಯೋಜಿತವಾಗಿ ರೂಪಿಸಿದ್ದಾನೆ ಎನ್ನಲಾಗಿದೆ. ಜುಲೈ 15ರಂದು ಉಪ್ಪಿನಂಗಡಿಗೆ ಬಂದಿದ್ದ ಆತ, ಕೃಷಿ ಸಲಕರಣೆಗಳ ಅಂಗಡಿಗೆ ತೆರಳಿ ಉದ್ದನೆಯ ಕತ್ತಿಯನ್ನು ಪರಿಶೀಲಿಸಿ ಅದರ ಬೆಲೆ ವಿಚಾರಿಸಿದ್ದ. ಬಳಿಕ ಸ್ವಲ್ಪ ಸಮಯದ ನಂತರ ಮತ್ತೆ ಅದೇ ಅಂಗಡಿಗೆ ಮರಳಿ ಕತ್ತಿಯನ್ನು ಖರೀದಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕತ್ತಿಯನ್ನು ಕಾಗದದಲ್ಲಿ ಸುತ್ತಿ ಪ್ಯಾಕ್ ಮಾಡಿದ ಬಳಿಕ ಅದನ್ನು ಅಂಗಡಿಯಲ್ಲೇ ಕೆಲಕಾಲ ಇರಿಸಿ ಹೊರಗೆ ಹೋಗಿದ್ದ ಆರೋಪಿ, ಬಳಿಕ ಮರಳಿ ಬಂದು ಕತ್ತಿಯನ್ನು ಪಡೆದುಕೊಂಡು ತೆರಳಿರುವ ದೃಶ್ಯಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಈ ದೃಶ್ಯಗಳು ತನಿಖೆಗೆ ಪ್ರಮುಖ ಸಾಕ್ಷ್ಯವಾಗಿವೆ ಎಂದು ತಿಳಿದುಬಂದಿದೆ.


ಮತ್ತಷ್ಟು ಓದಿ :

ಮಂಗಳೂರಿನ ಮಹಿಳೆಗೆ MLC ಸ್ಥಾನ ಕೊಡಿಸುವ ನೆಪ! ₹1.5 ಕೋಟಿ ವಂಚನೆ, ಲೈಂಗಿಕ ದೌರ್ಜನ್ಯ ಆರೋಪ – ಸರ್ಕಾರಿ ಶಿಕ್ಷಕನ ವಿರುದ್ಧ FIR

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

1 thought on “ಲಾವಣ್ಯ ಕೊಲೆ ಪ್ರಕರಣ: ಕೊಲೆಗೆ ಬಳಸಿದ ಕತ್ತಿ ಖರೀದಿಸಿದ್ದ ಅಂಗಡಿಯಲ್ಲಿ ಆರೋಪಿ ಚೇತನ್‌ನಿಂದ ಮಹಜರು”

Leave a Comment