---Advertisement---

ಮಂಗಳೂರಿನ ಮಹಿಳೆಗೆ MLC ಸ್ಥಾನ ಕೊಡಿಸುವ ನೆಪ! ₹1.5 ಕೋಟಿ ವಂಚನೆ, ಲೈಂಗಿಕ ದೌರ್ಜನ್ಯ ಆರೋಪ – ಸರ್ಕಾರಿ ಶಿಕ್ಷಕನ ವಿರುದ್ಧ FIR

drusti news logo
On: July 30, 2026
ಚಿಕ್ಕಮಗಳೂರು ಡಿಸಿ ಭನ್ವರ್ ಸಿಂಗ್ ಮೀನಾ ಹೆಸರಿನಲ್ಲಿ ಸೈಬರ್ ವಂಚನೆ, ಆಹಾರ ಇಲಾಖೆ ಅಧಿಕಾರಿಗೆ ₹50 ಸಾವಿರ ನಷ್ಟ
---Advertisement---

ಬೆಂಗಳೂರು: ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ ಎಂದು ನಂಬಿಸಿ, ವಿಧಾನ ಪರಿಷತ್ (MLC) ನಾಮನಿರ್ದೇಶನ ಮಾಡಿಸುವುದಾಗಿ ಹೇಳಿ ಮಂಗಳೂರು ಮೂಲದ ಮಹಿಳೆಯೊಬ್ಬರಿಗೆ ಸುಮಾರು ₹1.5 ಕೋಟಿ ವಂಚನೆ ಮಾಡಿರುವುದಲ್ಲದೆ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕನ ವಿರುದ್ಧ ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ಮೂಲದ 54 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ, ಸಿರಿಗೆರೆ ನಿವಾಸಿ ಹಾಗೂ ಸರ್ಕಾರಿ ಶಾಲೆಯ ಶಿಕ್ಷಕ ಯರ್ರಿಸ್ವಾಮಿ, ಜೊತೆಗೆ ಸಿದ್ಧರಾಜು ಮತ್ತು ಬಸವರಾಜು ವಿರುದ್ಧ ಎಫ್‌ಐಆರ್ ದಾಖಲಾಗಿದೆ. 2024ರಿಂದ 2025ರ ಅವಧಿಯಲ್ಲಿ ಈ ಘಟನೆಗಳು ನಡೆದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಪ್ರಕಾರ, ಆರೋಪಿಯು ತಾನು ಕಾಂಗ್ರೆಸ್‌ನ ಹಿರಿಯ ನಾಯಕರ ಮಾಧ್ಯಮ ಸಲಹೆಗಾರ ಎಂದು ಪರಿಚಯಿಸಿಕೊಂಡಿದ್ದನು. ಪಕ್ಷದ ಹಲವು ನಾಯಕರೊಂದಿಗೆ ಆತ್ಮೀಯ ಸಂಪರ್ಕವಿದ್ದು, ಮಹಿಳೆಯನ್ನು ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಸದಸ್ಯೆಯಾಗಿ (MLC) ನಾಮನಿರ್ದೇಶನ ಮಾಡಿಸುತ್ತೇನೆ ಎಂದು ನಂಬಿಸಿ ಹಂತ ಹಂತವಾಗಿ ಸುಮಾರು ₹1.5 ಕೋಟಿ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಇದೇ ವೇಳೆ, ಎಐಸಿಸಿ ನಾಯಕರನ್ನು ಭೇಟಿಮಾಡಿಸುವುದಾಗಿ ಹೇಳಿ ಮಹಿಳೆಯನ್ನು ದೆಹಲಿಗೆ ಕರೆಸಿಕೊಂಡು ಹೋಟೆಲ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಜೀವ ಬೆದರಿಕೆಯನ್ನೂ ಒಡ್ಡಲಾಗಿದೆ ಎಂದು ಮಹಿಳೆ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಹಿಳೆ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ದೂರಿನ ಪರಿಶೀಲನೆ ನಡೆಸಿದ ನ್ಯಾಯಾಲಯ, ಪ್ರಕರಣ ದಾಖಲಿಸಿ ತನಿಖೆ ಆರಂಭಿಸುವಂತೆ ಸೂಚಿಸಿದೆ. ಅಲ್ಲದೆ, ಆಗಸ್ಟ್ 25ರೊಳಗೆ ತನಿಖಾ ವರದಿ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.


ಮತ್ತಷ್ಟು ಓದಿ :

ಬ್ಯಾಂಕ್ ಆಫ್ ಬರೋಡಾ ಸೈಬರ್ ದಾಳಿ: ಸಿಬ್ಬಂದಿಯ ಇಮೇಲ್ ಹ್ಯಾಕ್ ಆಗಿ ಗ್ರಾಹಕರ ಮಾಹಿತಿಗೆ ಅನಧಿಕೃತ ಪ್ರವೇಶ, ತಜ್ಞರಿಂದ ಎಚ್ಚರಿಕೆ

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

1 thought on “ಮಂಗಳೂರಿನ ಮಹಿಳೆಗೆ MLC ಸ್ಥಾನ ಕೊಡಿಸುವ ನೆಪ! ₹1.5 ಕೋಟಿ ವಂಚನೆ, ಲೈಂಗಿಕ ದೌರ್ಜನ್ಯ ಆರೋಪ – ಸರ್ಕಾರಿ ಶಿಕ್ಷಕನ ವಿರುದ್ಧ FIR”

Leave a Comment