ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹಲವು ದಿನಗಳಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸಚಿವ ಸಂಪುಟ ವಿಸ್ತರಣೆಗೆ ಇಂದು (ಆಗಸ್ಟ್ 3) ಸಂಜೆ 4 ಗಂಟೆಗೆ ಮುಹೂರ್ತ ನಿಗದಿಯಾಗಿದೆ. ಬೆಂಗಳೂರಿನ ಲೋಕಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ 20 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲರ ಅನುಮೋದನೆಯೊಂದಿಗೆ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದೆ.
20 ಮಂದಿಗೆ ಸಚಿವ ಸ್ಥಾನ
ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದ ಪಟ್ಟಿಯಂತೆ ಈ ಬಾರಿ 20 ಮಂದಿಗೆ ಸಚಿವ ಸ್ಥಾನ ದೊರೆತಿದೆ. ಈ ವಿಸ್ತರಣೆಯಲ್ಲಿ ಅನುಭವಿ ನಾಯಕರ ಜೊತೆಗೆ ಹೊಸ ಮುಖಗಳಿಗೂ ಅವಕಾಶ ನೀಡಲಾಗಿದೆ. ಪ್ರಾದೇಶಿಕ ಪ್ರಾತಿನಿಧ್ಯ, ಜಾತಿ ಸಮತೋಲನ ಹಾಗೂ ರಾಜಕೀಯ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನೂತನ ಸಚಿವರ ಸಂಭಾವ್ಯ ಪಟ್ಟಿ
- ಪಿ.ಎಂ. ನಾರಾಯಣಸ್ವಾಮಿ
- ಶಿವರಾಜ್ ತಂಗಡಗಿ
- ರುದ್ರಪ್ಪ ಲಮಾಣಿ
- ಟಿ. ರಘುಮೂರ್ತಿ
- ಬಿ. ನಾಗೇಂದ್ರ
- ಜಮೀರ್ ಅಹ್ಮದ್ ಖಾನ್
- ರಿಜ್ವಾನ್ ಅರ್ಷದ್
- ಸಂತೋಷ್ ಲಾಡ್
- ಮಧು ಬಂಗಾರಪ್ಪ
- ಪುಟ್ಟರಂಗ ಶೆಟ್ಟಿ
- ಮಂಕಾಳ್ ವೈದ್ಯ
- ಅಜಯ್ ಸಿಂಗ್
- ಚೆಲುವರಾಯಸ್ವಾಮಿ
- ಎಂ. ಶಿವಲಿಂಗೇಗೌಡ
- ಹೆಚ್.ಸಿ. ಬಾಲಕೃಷ್ಣ
- ಶಾಂತವೀರೇಗೌಡ
- ವಿಜಯಾನಂದ ಕಾಶಪ್ಪನವರ್
- ಲಕ್ಷ್ಮಣ್ ಸವದಿ
- ಬಸವರಾಜ್ ರಾಯರೆಡ್ಡಿ
ಪ್ರಮಾಣವಚನದ ಬಳಿಕ ಸಚಿವರಿಗೆ ಖಾತೆ ಹಂಚಿಕೆ ನಡೆಯಲಿದ್ದು, ಯಾರಿಗೆ ಯಾವ ಖಾತೆ ಸಿಗಲಿದೆ ಎಂಬುದರತ್ತ ರಾಜ್ಯದ ರಾಜಕೀಯ ವಲಯದ ಗಮನ ನೆಟ್ಟಿದೆ.
ಮತ್ತಷ್ಟು ಓದಿ :
ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ₹3.49 ಲಕ್ಷ ಸೈಬರ್ ವಂಚನೆ! ECI ಅಧಿಕಾರಿ ಎಂದು ನಂಬಿಸಿ ಖದೀಮರ ಕೈಚಳಕ











1 thought on “ಸಚಿವ ಸಂಪುಟ ವಿಸ್ತರಣೆ ಇಂದು ಸಂಜೆ 4 ಗಂಟೆಗೆ : 20 ಮಂದಿ ಸಚಿವರಾಗಿ ಪ್ರಮಾಣವಚನ”