---Advertisement---

ಸೈಬರ್ ವಂಚನೆಗೆ ಕಡಿವಾಣ: ಇನ್ಮುಂದೆ ಒಬ್ಬರಿಗೆ ಗರಿಷ್ಠ 9 ಸಿಮ್‌ ಕಾರ್ಡ್‌! ಕೇಂದ್ರದಿಂದ ಹೊಸ ನಿಯಮ

drusti news logo
On: August 19, 2026
ಸೈಬರ್ ವಂಚನೆ ತಡೆಗೆ ಹೊಸ ಸಿಮ್‌ ಕಾರ್ಡ್‌ ನಿಯಮ; ಒಬ್ಬರಿಗೆ ಗರಿಷ್ಠ 9 ಸಿಮ್‌ ಕಾರ್ಡ್‌ ಮಿತಿ
---Advertisement---

ನವದೆಹಲಿ, ಆ. 19: ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆ, ನಕಲಿ ಸಿಮ್‌ಗಳ ಬಳಕೆ ಹಾಗೂ ‘ಡಿಜಿಟಲ್ ಅರೆಸ್ಟ್’ ರೀತಿಯ ವಂಚನೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಸಿಮ್ ಕಾರ್ಡ್ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದೆ.

ಹೊಸ ವ್ಯವಸ್ಥೆಯಡಿ ಸಿಮ್ ಕಾರ್ಡ್ ನೀಡುವ ಮೊದಲು ಗ್ರಾಹಕರ ಗುರುತು ಹಾಗೂ ಇತರ ಮಾಹಿತಿಯನ್ನು ರಿಯಲ್‌ಟೈಮ್‌ನಲ್ಲಿ ಪರಿಶೀಲಿಸುವುದು ಕಡ್ಡಾಯವಾಗಲಿದೆ. ಟೆಲಿಕಾಂ ಕಂಪನಿಗಳು ಗ್ರಾಹಕರ ವಿವರಗಳನ್ನು ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ ಮೂಲಕ ಪರಿಶೀಲಿಸಿದ ಬಳಿಕವೇ ಹೊಸ ಸಂಪರ್ಕ ನೀಡಬೇಕಾಗುತ್ತದೆ.

ನಕಲಿ ಅಥವಾ ಅನುಮಾನಾಸ್ಪದ ದಾಖಲೆಗಳನ್ನು ಬಳಸಿ ಸಿಮ್ ಪಡೆಯುವ ಪ್ರಯತ್ನಗಳನ್ನು ವ್ಯವಸ್ಥೆಯ ಮೂಲಕವೇ ಪತ್ತೆಹಚ್ಚಿ ತಡೆಯುವ ಉದ್ದೇಶ ಹೊಂದಲಾಗಿದೆ.

ಕೇಂದ್ರದ ಹೊಸ ನಿಯಮದ ಪ್ರಮುಖ ಅಂಶವೆಂದರೆ, ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಗರಿಷ್ಠ 9 ಸಿಮ್ ಕಾರ್ಡ್‌ಗಳನ್ನು ಮಾತ್ರ ನೋಂದಾಯಿಸಲು ಅವಕಾಶ ಇರಲಿದೆ.

ಆದರೆ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಈ ಮಿತಿ 6 ಸಿಮ್ ಕಾರ್ಡ್‌ಗಳಿಗೆ ಸೀಮಿತವಾಗಿರಲಿದೆ.

ವ್ಯಕ್ತಿಯ ಹೆಸರಿನಲ್ಲಿ ಈಗಾಗಲೇ ಎಷ್ಟು ಮೊಬೈಲ್ ಸಂಪರ್ಕಗಳಿವೆ ಎಂಬುದನ್ನೂ ಸರ್ಕಾರದ ವ್ಯವಸ್ಥೆ ಮೂಲಕ ಪರಿಶೀಲಿಸಲಾಗುತ್ತದೆ. ಇದರಿಂದ ಬೇನಾಮಿ ಅಥವಾ ನಕಲಿ ದಾಖಲೆಗಳ ಮೂಲಕ ದೊಡ್ಡ ಸಂಖ್ಯೆಯಲ್ಲಿ ಸಿಮ್‌ಗಳನ್ನು ಪಡೆದು ಅವುಗಳನ್ನು ಸೈಬರ್ ಅಪರಾಧಗಳಿಗೆ ಬಳಸುವ ಸಾಧ್ಯತೆಯನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ.

ಒಂದು ಪ್ರಕರಣದ ತನಿಖೆ ವೇಳೆ ಪೊಲೀಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ದೊಡ್ಡ ಸೈಬರ್ ಅಪರಾಧ ಜಾಲವೊಂದನ್ನು ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ. ಈ ಜಾಲಕ್ಕೆ ಸಂಬಂಧಿಸಿದಂತೆ ಸೈಬರ್ ಅಪರಾಧಗಳಿಗೆ ಬಳಕೆಯಾಗುತ್ತಿದ್ದ ಸುಮಾರು 4,500 ಸಿಮ್ ಕಾರ್ಡ್‌ಗಳು ಪತ್ತೆಯಾಗಿದ್ದು, ಚೀನಾ ಮತ್ತು ಪಾಕಿಸ್ತಾನದ ಸಂಪರ್ಕದ ಬಗ್ಗೆಯೂ ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಕಲಿ ಗುರುತಿನ ಚೀಟಿಗಳ ಆಧಾರದಲ್ಲಿ ಸಿಮ್ ಪಡೆಯುವುದು, ಅವುಗಳನ್ನು ಸೈಬರ್ ವಂಚನೆಗಳಿಗೆ ಬಳಸುವುದು ಹಾಗೂ ಡಿಜಿಟಲ್ ಅರೆಸ್ಟ್‌ನಂತಹ ಪ್ರಕರಣಗಳನ್ನು ನಿಯಂತ್ರಿಸಲು ಟೆಲಿಕಾಂ ಕ್ಷೇತ್ರದಲ್ಲಿ ಮೇಲ್ವಿಚಾರಣೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ.

ಒಟ್ಟಿನಲ್ಲಿ, ಇನ್ಮುಂದೆ ಸಿಮ್ ಕಾರ್ಡ್ ಖರೀದಿಸುವ ಪ್ರಕ್ರಿಯೆಯಲ್ಲಿ ಗುರುತು ಪರಿಶೀಲನೆ, ಸಂಪರ್ಕಗಳ ಸಂಖ್ಯೆ ಮತ್ತು ಗ್ರಾಹಕರ ವಿವರಗಳ ಪರಿಶೀಲನೆಗೆ ಹೆಚ್ಚಿನ ಆದ್ಯತೆ ಸಿಗಲಿದೆ.


ಮತ್ತಷ್ಟು ಓದಿ :

16ರ ಹರೆಯದಲ್ಲೇ ವಿಶ್ವದ ಕಿರಿಯ ಪುರುಷ ಚಾರ್ಟರ್ಡ್ ಅಕೌಂಟೆಂಟ್; ಗಿನ್ನೆಸ್ ದಾಖಲೆ ಬರೆದ ಲಕ್ಷ್ಮಣನ್ ಮೇಯ್ಯಪ್ಪನ್

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

1 thought on “ಸೈಬರ್ ವಂಚನೆಗೆ ಕಡಿವಾಣ: ಇನ್ಮುಂದೆ ಒಬ್ಬರಿಗೆ ಗರಿಷ್ಠ 9 ಸಿಮ್‌ ಕಾರ್ಡ್‌! ಕೇಂದ್ರದಿಂದ ಹೊಸ ನಿಯಮ”

Leave a Comment