BEL Recruitment 2026 : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) 2026ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಒಟ್ಟು 59 ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಪ್ರಾಜೆಕ್ಟ್ ಇಂಜಿನಿಯರ್-I, PGT, TGT, PRT, GPT ಶಿಕ್ಷಕರು, ಲೆಕ್ಚರರ್, ಎಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ, ಟೆಕ್ನಿಷಿಯನ್ ‘C’ ಹಾಗೂ ಟ್ರೈನಿ ಇಂಜಿನಿಯರ್-I (ಮೆಕ್ಯಾನಿಕಲ್) ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಆಸಕ್ತ ಅಭ್ಯರ್ಥಿಗಳು BEL ಅಧಿಕೃತ ಜಾಬ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08 ಜುಲೈ 2026.
BEL ನೇಮಕಾತಿ 2026: ಪ್ರಮುಖ ಮಾಹಿತಿ
- ಸಂಸ್ಥೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
- ಒಟ್ಟು ಹುದ್ದೆಗಳು : 59
- ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು
- ಉದ್ಯೋಗ ಸ್ಥಳ : ಭಾರತಾದ್ಯಂತ
- ಅರ್ಜಿ ವಿಧಾನ : ಆನ್‌ಲೈನ್
- ಕೊನೆಯ ದಿನಾಂಕ : 08 ಜುಲೈ 2026
BEL Vacancy 2026: ಹುದ್ದೆಗಳ ವಿವರ ಮತ್ತು ವಯೋಮಿತಿ
| ಹುದ್ದೆ | ಹುದ್ದೆಗಳ ಸಂಖ್ಯೆ | ವಯೋಮಿತಿ |
|---|---|---|
| ಪ್ರಾಜೆಕ್ಟ್ ಎಂಜಿನಿಯರ್-I | 9 | ಗರಿಷ್ಠ 32 ವರ್ಷ |
| PGT ಶಿಕ್ಷಕರು | 12 | ಗರಿಷ್ಠ 45 ವರ್ಷ |
| TGT ಶಿಕ್ಷಕರು | 10 | ಗರಿಷ್ಠ 45 ವರ್ಷ |
| PRT ಶಿಕ್ಷಕರು | 7 | ಗರಿಷ್ಠ 45 ವರ್ಷ |
| GPT ಶಿಕ್ಷಕರು | 2 | ಗರಿಷ್ಠ 45 ವರ್ಷ |
| ಲೆಕ್ಚರರ್ | 3 | ಗರಿಷ್ಠ 45 ವರ್ಷ |
| ಎಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ | 4 | 18 ರಿಂದ 28 ವರ್ಷ |
| ಟೆಕ್ನಿಷಿಯನ್ ‘C’ | 3 | 18 ರಿಂದ 28 ವರ್ಷ |
| ಟ್ರೈನಿ ಇಂಜಿನಿಯರ್-I (ಮೆಕ್ಯಾನಿಕಲ್) | 9 | ಗರಿಷ್ಠ 28 ವರ್ಷ |
BEL Recruitment 2026 Eligibility: ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಕೆಳಕಂಡ ವಿದ್ಯಾರ್ಹತೆಗಳಲ್ಲಿ ಯಾವುದಾದರೂ ಒಂದನ್ನು ಹೊಂದಿರಬೇಕು.
- 10ನೇ ತರಗತಿ
- ITI
- ಡಿಪ್ಲೊಮಾ
- D.Ed
- BA
- B.Ed
- B.Sc
- ಪದವಿ
- BE/B.Tech
- MCA
- ME/M.Tech
- M.Com
- M.Sc
- M.Phil
- Ph.D
ಹುದ್ದೆವಾರು ವಿದ್ಯಾರ್ಹತೆ
- ಪ್ರಾಜೆಕ್ಟ್ ಎಂಜಿನಿಯರ್-I : BE/B.Tech
- PGT, TGT, PRT, GPT ಹಾಗೂ ಲೆಕ್ಚರರ್ : D.Ed, BA, B.Ed, B.Sc, ಪದವಿ, BE/B.Tech, MCA, ME/M.Tech, M.Sc, M.Phil, Ph.D
- ಎಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ : ಡಿಪ್ಲೊಮಾ
- ಟೆಕ್ನಿಷಿಯನ್ ‘C’ : 10ನೇ ತರಗತಿ, ITI
- ಟ್ರೈನಿ ಇಂಜಿನಿಯರ್-I (ಮೆಕ್ಯಾನಿಕಲ್) : B.Sc ಅಥವಾ BE/B.Tech
BEL Salary 2026 : ವೇತನ ವಿವರ
- ಪ್ರಾಜೆಕ್ಟ್ ಎಂಜಿನಿಯರ್-I : ₹40,000 ರಿಂದ ₹55,000
- PGT, TGT, PRT, GPT ಹಾಗೂ ಲೆಕ್ಚರರ್ : BEL ನಿಯಮಾನುಸಾರ
- ಎಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ : ₹24,500 ರಿಂದ ₹90,000
- ಟೆಕ್ನಿಷಿಯನ್ ‘C’ : ₹21,500 ರಿಂದ ₹82,000
- ಟ್ರೈನಿ ಇಂಜಿನಿಯರ್-I (ಮೆಕ್ಯಾನಿಕಲ್) : ₹30,000 ರಿಂದ ₹35,000
BEL Recruitment 2026 Age Relaxation : ವಯೋಮಿತಿ ಸಡಿಲಿಕೆ
- OBC ಅಭ್ಯರ್ಥಿಗಳಿಗೆ : 3 ವರ್ಷ
- SC/ST ಅಭ್ಯರ್ಥಿಗಳಿಗೆ : 5 ವರ್ಷ
- PwD ಅಭ್ಯರ್ಥಿಗಳಿಗೆ : 10 ವರ್ಷ
BEL Application Fee 2026: ಅರ್ಜಿ ಶುಲ್ಕ
ಪ್ರಾಜೆಕ್ಟ್ ಎಂಜಿನಿಯರ್-I
- ಇತರೆ ಅಭ್ಯರ್ಥಿಗಳು: ₹472
- SC/ST ಹಾಗೂ PwBD ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
ಎಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ
- ಸಾಮಾನ್ಯ, OBC ಹಾಗೂ EWS ಅಭ್ಯರ್ಥಿಗಳು: ₹295
- SC/ST, PwBD ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
ಟ್ರೈನಿ ಇಂಜಿನಿಯರ್-I
- ಸಾಮಾನ್ಯ, OBC ಹಾಗೂ EWS ಅಭ್ಯರ್ಥಿಗಳು: ₹177
- SC/ST ಹಾಗೂ PwBD ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
ಶುಲ್ಕ ಪಾವತಿ ವಿಧಾನ: ಆನ್‌ಲೈನ್
BEL Selection Process 2026: ಆಯ್ಕೆ ಪ್ರಕ್ರಿಯೆ
- ಲಿಖಿತ ಪರೀಕ್ಷೆ
- ಸಂದರ್ಶನ
BEL Recruitment 2026 Apply Online: ಅರ್ಜಿ ಸಲ್ಲಿಸುವ ವಿಧಾನ
- BEL ಅಧಿಕೃತ ಅಧಿಸೂಚನೆಯನ್ನು ಓದಿ.
- ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.
- ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
- ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ದಾಖಲೆಗಳು ಹಾಗೂ ಭಾವಚಿತ್ರವನ್ನು ಅಪ್‌ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿಸಿ.
- ಅರ್ಜಿ ಸಲ್ಲಿಸಿದ ಬಳಿಕ ರೆಫರೆನ್ಸ್ ಸಂಖ್ಯೆಯನ್ನು ಉಳಿಸಿಕೊಳ್ಳಿ.
BEL Recruitment 2026 Important Dates : ಪ್ರಮುಖ ದಿನಾಂಕಗಳು
- ಅರ್ಜಿ ಆರಂಭ ದಿನಾಂಕ : 17 ಜೂನ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08 ಜುಲೈ 2026
ಹುದ್ದೆವಾರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
- ಪ್ರಾಜೆಕ್ಟ್ ಎಂಜಿನಿಯರ್-I: 04 ಜುಲೈ 2026
- PGT: 07 ಜುಲೈ 2026
- TGT: 07 ಜುಲೈ 2026
- PRT: 07 ಜುಲೈ 2026
- GPT: 07 ಜುಲೈ 2026
- ಲೆಕ್ಚರರ್: 07 ಜುಲೈ 2026
- ಎಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ: 08 ಜುಲೈ 2026
- ಟೆಕ್ನಿಷಿಯನ್ ‘C’: 08 ಜುಲೈ 2026
- ಟ್ರೈನಿ ಇಂಜಿನಿಯರ್-I (ಮೆಕ್ಯಾನಿಕಲ್): 01 ಜುಲೈ 2026
BEL Recruitment 2026 Notification PDF Links
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಸಂಬಂಧಿತ ಹುದ್ದೆಯ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತಾ ಮಾನದಂಡಗಳು, ಅನುಭವ, ವೇತನ ಹಾಗೂ ಆಯ್ಕೆ ಪ್ರಕ್ರಿಯೆಯ ವಿವರಗಳನ್ನು ಪರಿಶೀಲಿಸಬಹುದು.
Project Engineer – I : Notification PDF
PGT, TGT, PRT, GPT ಹಾಗೂ Lecturer Posts : Notification PDF
Engineering Assistant Trainee (EAT) & Technician ‘C’ : Notification PDF
Trainee Engineer-I (Mechanical) : Notification PDF
BEL Recruitment 2026 Apply Online Link
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು BEL ಅಧಿಕೃತ ಜಾಬ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Apply Online : Click Here to apply
BELನಲ್ಲಿ ಉದ್ಯೋಗ ಪಡೆಯಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಸಂಬಂಧಿತ ಅಧಿಸೂಚನೆಯನ್ನು ಪರಿಶೀಲಿಸಿ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.
ಇನ್ನಷ್ಟು ಉದ್ಯೋಗಾವಕಾಶಗಳು :
CISF ನೇಮಕಾತಿ 2026: 24 ಪ್ಯಾರಾ ಮೆಡಿಕಲ್ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹92,300 ವರೆಗೆ ವೇತನ
BSNL JTO 2026 ನೇಮಕಾತಿ ದೊಡ್ಡ ಅಪ್ಡೇಟ್
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 3,395 ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿ: ಜೂನ್ 8ರಿಂದ ಅರ್ಜಿ ಸಲ್ಲಿಕೆ ಆರಂಭ















1 thought on “BEL Recruitment 2026 : 59 ಹುದ್ದೆಗಳ ಭರ್ತಿ, ಇಂಜಿನಿಯರ್, ಶಿಕ್ಷಕ ಹಾಗೂ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ”