---Advertisement---

ಚಿಕ್ಕಬಳ್ಳಾಪುರ ಹೋಂಸ್ಟೇಯಲ್ಲಿ ಯುವತಿ ಅನುಮಾನಾಸ್ಪದ ಸಾವು : ಕುಟುಂಬದಿಂದ ‘ಲವ್ ಜಿಹಾದ್’ ಆರೋಪ, ಎಲ್ಲ ಆಯಾಮಗಳಲ್ಲಿ ಪೊಲೀಸರ ತನಿಖೆ

drusti news logo
On: June 30, 2026
ಚಿಕ್ಕಬಳ್ಳಾಪುರದ ಹೋಂಸ್ಟೇಯಲ್ಲಿ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣ
---Advertisement---

ಚಿಕ್ಕಬಳ್ಳಾಪುರ: ಜಿಲ್ಲೆಯ ಮುದ್ದೇನಹಳ್ಳಿ ಸಮೀಪದ ಖಾಸಗಿ ಹೋಂಸ್ಟೇಯೊಂದರಲ್ಲಿ ಬೆಂಗಳೂರಿನ ಯುವತಿ ಸಾಯಿ ಸುರಭಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆಕೆಯೊಂದಿಗೆ ಹೋಂಸ್ಟೇಯಲ್ಲಿ ತಂಗಿದ್ದ ಸಂಜೀತ್ ಅಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.

ಪ್ರಾಥಮಿಕ ಮಾಹಿತಿಯಂತೆ, ಸಾಯಿ ಸುರಭಿ ಮತ್ತು ಸಂಜೀತ್ ಅಲಿ ಹೋಂಸ್ಟೇಯಲ್ಲಿ ತಂಗಿದ್ದರು. ನಿಗದಿತ ಸಮಯದ ಬಳಿಕವೂ ಕೊಠಡಿಯಿಂದ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಯುವತಿ ಮೃತ ಸ್ಥಿತಿಯಲ್ಲಿ ಹಾಗೂ ಯುವಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಘಟನೆಗೆ ಸಂಬಂಧಿಸಿದಂತೆ ಮೃತೆಯ ತಾಯಿ ಇದು ಪೂರ್ವನಿಯೋಜಿತ ಕೃತ್ಯವಾಗಿದ್ದು, ‘ಲವ್ ಜಿಹಾದ್’ ಪ್ರಕರಣವೆಂದು ಆರೋಪಿಸಿದ್ದಾರೆ. ಹಾಗೆಯೇ ಸಂಜಿತ್ ಅಲಿ ತನ್ನ ಮಗಳಿಗೆ ಡ್ರಗ್ಸ್ ಚಟವನ್ನು ಹತ್ತಿಸಿ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಈ ಹಿಂದೆ ಡ್ರಗ್ಸ್ ಚಟವನ್ನು ಬಿಡಲು ಚಿಕಿತ್ಸೆ ಕೊಡಿಸಿದ್ದು ತದನಂತರ ಆರೋಗ್ಯವಾಗಿ ಇದ್ದಳು ಎಂದು ಹೇಳಿದ್ದಾರೆ.

ಇದೇ ವೇಳೆ, ಪ್ರಕರಣದ ಕುರಿತು ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ, ವಿಧಿವಿಜ್ಞಾನ ವರದಿ, ಡಿಜಿಟಲ್ ಸಾಕ್ಷ್ಯಗಳು ಹಾಗೂ ಇತರ ಪುರಾವೆಗಳ ಆಧಾರದ ಮೇಲೆ ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಸದ್ಯ ಕೊಲೆ ಸೇರಿದಂತೆ ಎಲ್ಲಾ ಸಾಧ್ಯತೆಗಳನ್ನೂ ಪರಿಗಣಿಸಿ ತನಿಖೆ ಮುಂದುವರಿದಿದೆ.


ಮತ್ತಷ್ಟು ಓದಿ :

ವಿಟ್ಲದಲ್ಲಿ ಮಟ್ಕಾ ಜೂಜಾಟಕ್ಕೆ ಪೊಲೀಸರ ಬ್ರೇಕ್ : ದಾಳಿಯಲ್ಲಿ ಓರ್ವ ವಶ, ಮೊಬೈಲ್ ಮತ್ತು ನಗದು ಜಪ್ತಿ

ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣದ ವೇಳೆ ಚಿನ್ನದ ಮಾಂಗಲ್ಯ ಸರ ಕಳವು; ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

ಇದನ್ನು ಓದಿ

ಉಡುಪಿಯಲ್ಲಿ ಎಂ.ಡಿ.ಎಂ.ಎ ಮತ್ತು ಹೈಡ್ರೋ ಗಾಂಜಾ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ ಪೊಲೀಸ್ ಕಾರ್ಯಾಚರಣೆ

ಉಡುಪಿಯಲ್ಲಿ ಮಾದಕವಸ್ತು ಜಾಲಕ್ಕೆ ಪೊಲೀಸರ ದೊಡ್ಡ ಹೊಡೆತ: ಎಂ.ಡಿ.ಎಂ.ಎ, ಹೈಡ್ರೋ ಗಾಂಜಾ ಸಹಿತ ಮೂವರು ಬಂಧನ

ಭಾರತದ ಸಮುದ್ರಾಹಾರ ರಫ್ತು ಹೊಸ ದಾಖಲೆ ನಿರ್ಮಿಸಿ ₹73,890 ಕೋಟಿ ಆದಾಯ ಗಳಿಸಿದ ಮೀನುಗಾರಿಕೆ ಕ್ಷೇತ್ರ

ಭಾರತದ ಸಮುದ್ರಾಹಾರ ರಫ್ತಿಗೆ ಹೊಸ ದಾಖಲೆ : ₹73,890 ಕೋಟಿ ಆದಾಯ, 75ಕ್ಕೂ ಹೆಚ್ಚು ದೇಶಗಳಿಗೆ 19.72 ಲಕ್ಷ ಮೆಟ್ರಿಕ್ ಟನ್ ರಫ್ತು

Airtel 5G ಅನ್‌ಲಿಮಿಟೆಡ್ ಡೇಟಾ ಹಾಟ್‌ಸ್ಪಾಟ್ ಬಳಕೆಯ ಹೊಸ ನಿರ್ಬಂಧದ ಕುರಿತು ಚರ್ಚೆ

Airtel 5G ಬಳಕೆದಾರರಿಗೆ ಶಾಕ್? ಅನ್‌ಲಿಮಿಟೆಡ್ 5G ಡೇಟಾದ ಹಾಟ್‌ಸ್ಪಾಟ್ ಬಳಕೆಗೆ ಹೊಸ ನಿರ್ಬಂಧದ ಚರ್ಚೆ

ಕರ್ನಾಟಕದಲ್ಲಿ ಮತ್ತೆ ಚುರುಕಾದ ಮುಂಗಾರು ಮಳೆ

ಕರ್ನಾಟಕದಲ್ಲಿ ಮತ್ತೆ ಚುರುಕುಗೊಂಡ ಮುಂಗಾರು : ಮುಂದಿನ 7 ದಿನ ರಾಜ್ಯಾದ್ಯಂತ ಮಳೆ ಸಾಧ್ಯತೆ, ಕರಾವಳಿ-ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಕರಾವಳಿಯಲ್ಲಿ ನಾಡದೋಣಿ ಮೀನುಗಾರಿಕೆ ಆರಂಭವಾಗದೆ ಸಮುದ್ರ ತೀರದಲ್ಲಿ ಕಾಯುತ್ತಿರುವ ಮೀನುಗಾರರು

ಕರಾವಳಿಯಲ್ಲಿ ಇನ್ನೂ ಆರಂಭವಾಗದ ನಾಡದೋಣಿ ಮೀನುಗಾರಿಕೆ; ಬದುಕಿನ ಭರವಸೆಯಾದ ‘ಕೈರಂಪಣಿ’ಗಾಗಿ ಕಾಯುತ್ತಿರುವ ಮೀನುಗಾರರು

ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಕಡ್ಡಾಯ ಸಿಸಿಟಿವಿ ಅಳವಡಿಕೆ

ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಕಡ್ಡಾಯ ಸಿಸಿಟಿವಿ; ಭದ್ರತೆಗಾಗಿ ಸರ್ಕಾರದ ಮಹತ್ವದ ನಿರ್ಧಾರ

Leave a Comment