ಚಿಕ್ಕಮಗಳೂರು : ಜಿಲ್ಲೆಯ ಕಡೂರು-ತರೀಕೆರೆ ಗಡಿಭಾಗದಲ್ಲಿ ಮನಕಲಕುವ ಘಟನೆ ನಡೆದಿದ್ದು, ಪೊಲೀಸರ ವಿಚಾರಣೆಗೆ ಒಳಗಾಗಿದ್ದ ಯುವಕನೊಬ್ಬ ತಡರಾತ್ರಿ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದ ನಿವಾಸಿ ಚಂದನ್ (20) ಮೃತ ಯುವಕ ಎಂದು ಗುರುತಿಸಲಾಗಿದೆ.
ಮೇಲ್ನೋಟಕ್ಕೆ ಜನರ ಆಡಿಕೊಳ್ಳುವ ಮಾತುಗಳಿಗೆ ಮನನೊಂದು ಯುವಕ ಈ ಹೆಜ್ಜೆ ಇಟ್ಟಿದ್ದಾನೆ ಎಂದು ಹೇಳಲಾಗುತ್ತಿದೆಯಾದರೂ, ಸಾವಿಗೆ ನಿಖರ ಕಾರಣ ಏನೆಂಬುದು ಇನ್ನೂ ನಿಗೂಢವಾಗಿದೆ.
ಇತ್ತೀಚೆಗೆ ಕುಡ್ಲೂರು ಗ್ರಾಮದ ಯುವತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಮನೆ ಬಿಟ್ಟು ಓಡಿಹೋಗಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದ ಯುವತಿಯ ಮೊಬೈಲ್ ಕರೆಗಳ ದಾಖಲೆಯನ್ನು (CDR) ಪೊಲೀಸರು ಪರಿಶೀಲಿಸಿದ ವೇಳೆ, ಆಕೆಯ ಫೋನ್‌ನಲ್ಲಿ ಮೃತ ಚಂದನ್ ಅವರ ನಂಬರ್ ಪತ್ತೆಯಾಗಿತ್ತು. ಯುವತಿಯೊಂದಿಗೆ ಚಂದನ್ ನಿಯಮಿತವಾಗಿ ಮಾತನಾಡುತ್ತಿದ್ದುದು ತನಿಖೆಯಿಂದ ಬೆಳಕಿಗೆ ಬಂದಿತ್ತು.
ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿ ಪಡೆಯಲು ಮತ್ತು ವಿಚಾರಣೆಯ ಭಾಗವಾಗಿ ಬೀರೂರು ಪೊಲೀಸರು ಚಂದನ್‌ನನ್ನು ಠಾಣೆಗೆ ಕರೆಸಿದ್ದರು. ಪೊಲೀಸರು ತಮ್ಮದೇ ಆದ ಶೈಲಿಯಲ್ಲಿ ವಿಚಾರಣೆ ನಡೆಸಿದ ಬಳಿಕ ನೆನ್ನೆ ಸಂಜೆ ಚಂದನ್‌ನನ್ನು ಸುರಕ್ಷಿತವಾಗಿ ಮನೆಗೆ ವಾಪಸ್ ಕಳುಹಿಸಿಕೊಟ್ಟಿದ್ದರು.
ಆದರೆ ಮನೆಗೆ ಮರಳಿದ ಚಂದನ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಊರಿನ ಯುವತಿ ಓಡಿಹೋಗಿದ್ದಕ್ಕೂ ಚಂದನ್‌ನೇ ಪ್ರಮುಖ ಕಾರಣ ಎಂದು ಸ್ಥಳೀಯರು ಹಾಗೂ ಗ್ರಾಮಸ್ಥರು ಮಾತನಾಡಿಕೊಳ್ಳಲು ಆರಂಭಿಸಿದ್ದರು. ಈ ಅಪವಾದವನ್ನು ತಡೆದುಕೊಳ್ಳಲಾಗದೆ, ಸಮಾಜದಲ್ಲಿ ತನಗಾದ ಮಾನಹಾನಿಯಿಂದ ಮನನೊಂದ ಚಂದನ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ ಎನ್ನಲಾಗಿದೆ.
ತನ್ನ ಪ್ರಾಣ ಕಳೆದುಕೊಳ್ಳುವ ಮುನ್ನ ಆತ ತನ್ನ ತಾಯಿಯ ಮೊಬೈಲ್‌ಗೆ ಕೊನೆಯದಾಗಿ ಸಂದೇಶವೊಂದನ್ನು ಕಳುಹಿಸಿದ್ದು, ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪ್ರಸ್ತುತ ಈ ಘಟನೆ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಚಂದನ್ ಸಾವಿನ ಹಿಂದಿನ ಅಸಲಿ ಸತ್ಯ ಮತ್ತು ನಿಖರ ಕಾರಣ ಏನೆಂಬುದು ಸಂಪೂರ್ಣ ತನಿಖೆಯ ಬಳಿಕವೇ ಹೊರಬರಬೇಕಿದೆ.
ಮತ್ತಷ್ಟು ಓದಿ
₹20 ಲಕ್ಷ ಸಂಬಳದ ಎಂಜಿನಿಯರ್‌ನಿಂದ ಡೀಪ್‌ಫೇಕ್ ವಿಡಿಯೊ! Rukmini vasanth AI ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಮಾಹಿತಿ













1 thought on “ಚಿಕ್ಕಮಗಳೂರು : ಪೊಲೀಸ್ ವಿಚಾರಣೆಯ ಬಳಿಕ ಯುವಕ ಆತ್ಮಹತ್ಯೆ, ಸಾವಿನ ಹಿಂದಿನ ಕಾರಣ ನಿಗೂಢ”