---Advertisement---

ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಮಹಿಳೆ ಹೆಸರಲ್ಲಿ ಕೋಟಿ ವಂಚನೆ? ಕ್ರಿಪ್ಟೋ ಹೂಡಿಕೆ ಆಮಿಷಕ್ಕೆ ಬೆಂಗಳೂರಿನ ವ್ಯಕ್ತಿ ಬಲಿ

drusti news logo
On: August 5, 2026
ಮ್ಯಾಟ್ರಿಮೋನಿ ಮೂಲಕ ಪರಿಚಯವಾಗಿ ಕ್ರಿಪ್ಟೋ ವಂಚನೆಗೆ ಬಲಿಯಾದ ಬೆಂಗಳೂರಿನ ವ್ಯಕ್ತಿಯ ಪ್ರಕರಣ
---Advertisement---

ಬೆಂಗಳೂರು, ಆ. 5: ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯವಾದ ಮಹಿಳೆಯೊಬ್ಬಳ ಮಾತು ನಂಬಿದ ಬೆಂಗಳೂರಿನ ವ್ಯಕ್ತಿಯೊಬ್ಬರು ನಕಲಿ ಕ್ರಿಪ್ಟೋಕರೆನ್ಸಿ ಹೂಡಿಕೆ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದೂರುದಾರರಿಗೆ ‘ನಿಹಾರಿಕಾ ಚೌಧರಿ’ ಎಂಬ ಹೆಸರಿನಲ್ಲಿ ಮಹಿಳೆಯೊಬ್ಬಳು ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಪರಿಚಯವಾಗಿದ್ದಳು. ತಾನು ಆಂಧ್ರಪ್ರದೇಶದ ವಿಜಯವಾಡ ಮೂಲದವಳಾಗಿದ್ದು, ಪ್ರಸ್ತುತ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಲಾಜಿಸ್ಟಿಕ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಳು.

ನಂತರ ವಾಟ್ಸಾಪ್ ಮೂಲಕ ನಿರಂತರ ಸಂಪರ್ಕದಲ್ಲಿದ್ದು, ವಿಶ್ವಾಸ ಗಳಿಸಿದ ಬಳಿಕ mivonexchg.com ಹಾಗೂ binzoex.com ಎಂಬ ಕ್ರಿಪ್ಟೋ ಟ್ರೇಡಿಂಗ್ ವೆಬ್‌ಸೈಟ್‌ಗಳಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆಕೆಯ ಸೂಚನೆಯಂತೆ ದೂರುದಾರರು ವಿವಿಧ ಕ್ರಿಪ್ಟೋ ಎಕ್ಸ್‌ಚೇಂಜ್‌ಗಳ ಮೂಲಕ USDT (ಟೆಥರ್) ಖರೀದಿಸಿ, ಸುಮಾರು 30,000 USDT ಅನ್ನು ವಿವಿಧ ಕ್ರಿಪ್ಟೋ ವಾಲೆಟ್‌ಗಳಿಗೆ ವರ್ಗಾಯಿಸಿದ್ದರು.

ನಂತರ ಹೂಡಿಕೆ ಮಾಡಿದ ಹಣವನ್ನು ವಾಪಸ್ ಪಡೆಯಲು ಪ್ರಯತ್ನಿಸಿದಾಗ, ತೆರಿಗೆ ಹಾಗೂ ಇತರೆ ಶುಲ್ಕಗಳನ್ನು ಪಾವತಿಸಬೇಕು ಎಂದು ವೆಬ್‌ಸೈಟ್ ಸೂಚಿಸಿತು. ಹೆಚ್ಚುವರಿ ಹಣ ಪಾವತಿಸಿದರೂ ಹಣ ವಾಪಸ್ ಸಿಗದ ಹಿನ್ನೆಲೆಯಲ್ಲಿ ತಾವು ಮೋಸ ಹೋಗಿರುವುದು ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಆರೋಪಿಗಳು ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ನಕಲಿ ಗುರುತು ಸೃಷ್ಟಿಸಿ, ಪರಿಚಯ ಬೆಳೆಸಿ ಬಳಿಕ ನಕಲಿ ಕ್ರಿಪ್ಟೋ ಹೂಡಿಕೆ ವೇದಿಕೆಗಳಲ್ಲಿ ಹಣ ಹೂಡಿಸಲು ಪ್ರೇರೇಪಿಸುತ್ತಿದ್ದರು. ಹಣವನ್ನು ವಿವಿಧ ಕ್ರಿಪ್ಟೋ ವಾಲೆಟ್‌ಗಳಿಗೆ ವರ್ಗಾಯಿಸಿಕೊಂಡು ವಂಚನೆ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಬಳಸಲಾದ ವೆಬ್‌ಸೈಟ್‌ಗಳ ನೈಜತೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ.


ಮತ್ತಷ್ಟು ಓದಿ :

ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ದರೋಡೆ: ಉಳ್ಳಾಲದಲ್ಲಿ ವೃದ್ಧೆಯ ಚಿನ್ನಾಭರಣ ಕಳವು, 16 ಪೊಲೀಸರ ವಿಶೇಷ ತಂಡ ರಚನೆ

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

1 thought on “ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಮಹಿಳೆ ಹೆಸರಲ್ಲಿ ಕೋಟಿ ವಂಚನೆ? ಕ್ರಿಪ್ಟೋ ಹೂಡಿಕೆ ಆಮಿಷಕ್ಕೆ ಬೆಂಗಳೂರಿನ ವ್ಯಕ್ತಿ ಬಲಿ”

Leave a Comment