---Advertisement---

ಮುಳ್ಳಯ್ಯನಗಿರಿ ಅರಣ್ಯದಲ್ಲಿ ಗಾಯಗೊಂಡ ಹುಲಿ ಸಂಚಾರ

drusti news logo
On: June 25, 2026
ಮುಳ್ಳಯ್ಯನಗಿರಿ ಅರಣ್ಯ ಪ್ರದೇಶದಲ್ಲಿ ಉರುಳಿಗೆ ಸಿಲುಕಿ ಗಾಯಗೊಂಡ ಹುಲಿ ಸಂಚಾರ
---Advertisement---

ಚಿಕ್ಕಮಗಳೂರು: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ ತಪ್ಪಲು ಪ್ರದೇಶದಲ್ಲಿ ಉರುಳಿಗೆ ಸಿಲುಕಿ ಗಾಯಗೊಂಡಿರುವ ಹುಲಿಯ ಸಂಚಾರ ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಈ ಹುಲಿ ಅರಣ್ಯ ಪ್ರದೇಶದ ಸುತ್ತಮುತ್ತ ಓಡಾಡುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು, ತೋಟದ ಕಾರ್ಮಿಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಎಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆ ಸೂಚಿಸಿದೆ.

ಮಾಹಿತಿಯ ಪ್ರಕಾರ, ಹುಲಿಯ ಸೊಂಟದ ಭಾಗದಲ್ಲಿ ಉರುಳು ಇನ್ನೂ ನೇತಾಡುತ್ತಿದ್ದು, ಅದರ ಪರಿಣಾಮವಾಗಿ ಪ್ರಾಣಿ ತೀವ್ರ ನೋವಿನಿಂದ ಬಳಲುತ್ತಿದೆ. ಗಾಯಗೊಂಡಿದ್ದರೂ ಸಹ ಹುಲಿ ತನ್ನ ಬೇಟೆಯಾಡುವ ಸ್ವಭಾವವನ್ನು ಮುಂದುವರಿಸಿದ್ದು, ಜಿಂಕೆ ಹಾಗೂ ಕಡವೆಗಳನ್ನು ಬೇಟೆಯಾಡಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಅರಣ್ಯ ಪ್ರದೇಶದ ವಿವಿಧ ಭಾಗಗಳಲ್ಲಿ ಪ್ರಾಣಿಗಳ ಅವಶೇಷಗಳು ಪತ್ತೆಯಾಗಿರುವುದರಿಂದ ಹುಲಿ ಸಕ್ರಿಯವಾಗಿರುವುದು ದೃಢಪಟ್ಟಿದೆ. ಇದನ್ನು ಓದಿ : ಭಟ್ಕಳದಲ್ಲಿ ಬಾವಿಗೆ ಬಿದ್ದ ಚಿರತೆಗೆ ಜೀವದಾನ : ಅರಣ್ಯಇಲಾಖೆಯ ಯಶಸ್ವಿ ರಕ್ಷಣಾ ಕಾರ್ಯಾಚರಣೆ

ಗಾಯಗೊಂಡ ಹುಲಿಯನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಅರಣ್ಯ ಇಲಾಖೆ ಕಳೆದ ಮೂರುರಿಂದ ನಾಲ್ಕು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಹುಲಿಯ ಚಲನವಲನಗಳನ್ನು ನಿಖರವಾಗಿ ಪತ್ತೆಹಚ್ಚಲು ವಿವಿಧ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅದರ ಓಡಾಟದ ಮೇಲೆ ನಿಗಾ ಇಡಲಾಗಿದೆ.

ಹುಲಿಯ ಅಪ್ರತೀಕ್ಷಿತ ದಾಳಿಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ತೋಟದ ಕಾರ್ಮಿಕರು ತಾತ್ಕಾಲಿಕವಾಗಿ ಕೆಲಸಕ್ಕೆ ತೆರಳದಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇದರಿಂದ ಸ್ಥಳೀಯರಲ್ಲೂ ಆತಂಕ ಹೆಚ್ಚಾಗಿದೆ.

ಪಂಡರವಳ್ಳಿ, ಕೊಳಗಾಮೆ ಹಾಗೂ ಏಳುನೂರ್ ಖಾನ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ರಸ್ತೆಗಳಲ್ಲಿ ಸಂಚರಿಸಲು ಸಹ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹುಲಿ ಯಾವ ಕ್ಷಣದಲ್ಲಾದರೂ ಜನವಸತಿ ಪ್ರದೇಶದತ್ತ ಬರಬಹುದೆಂಬ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ.

ಅರಣ್ಯ ಇಲಾಖೆ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು, ಜನರು ಅನಗತ್ಯವಾಗಿ ಅರಣ್ಯ ಪ್ರದೇಶಗಳಿಗೆ ತೆರಳಬಾರದು ಹಾಗೂ ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದೆ.

ಈ ಘಟನೆಯ ಬೆನ್ನಲ್ಲೇ ಪರಿಸರವಾದಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಉರುಳು ಅಳವಡಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಕಾಡುಪ್ರಾಣಿಗಳ ಜೀವಕ್ಕೆ ಅಪಾಯ ಉಂಟುಮಾಡುವ ಇಂತಹ ಕೃತ್ಯಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಅಗತ್ಯವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

ಇದನ್ನು ಓದಿ

ಉಡುಪಿಯಲ್ಲಿ ಎಂ.ಡಿ.ಎಂ.ಎ ಮತ್ತು ಹೈಡ್ರೋ ಗಾಂಜಾ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ ಪೊಲೀಸ್ ಕಾರ್ಯಾಚರಣೆ

ಉಡುಪಿಯಲ್ಲಿ ಮಾದಕವಸ್ತು ಜಾಲಕ್ಕೆ ಪೊಲೀಸರ ದೊಡ್ಡ ಹೊಡೆತ: ಎಂ.ಡಿ.ಎಂ.ಎ, ಹೈಡ್ರೋ ಗಾಂಜಾ ಸಹಿತ ಮೂವರು ಬಂಧನ

ಭಾರತದ ಸಮುದ್ರಾಹಾರ ರಫ್ತು ಹೊಸ ದಾಖಲೆ ನಿರ್ಮಿಸಿ ₹73,890 ಕೋಟಿ ಆದಾಯ ಗಳಿಸಿದ ಮೀನುಗಾರಿಕೆ ಕ್ಷೇತ್ರ

ಭಾರತದ ಸಮುದ್ರಾಹಾರ ರಫ್ತಿಗೆ ಹೊಸ ದಾಖಲೆ : ₹73,890 ಕೋಟಿ ಆದಾಯ, 75ಕ್ಕೂ ಹೆಚ್ಚು ದೇಶಗಳಿಗೆ 19.72 ಲಕ್ಷ ಮೆಟ್ರಿಕ್ ಟನ್ ರಫ್ತು

Airtel 5G ಅನ್‌ಲಿಮಿಟೆಡ್ ಡೇಟಾ ಹಾಟ್‌ಸ್ಪಾಟ್ ಬಳಕೆಯ ಹೊಸ ನಿರ್ಬಂಧದ ಕುರಿತು ಚರ್ಚೆ

Airtel 5G ಬಳಕೆದಾರರಿಗೆ ಶಾಕ್? ಅನ್‌ಲಿಮಿಟೆಡ್ 5G ಡೇಟಾದ ಹಾಟ್‌ಸ್ಪಾಟ್ ಬಳಕೆಗೆ ಹೊಸ ನಿರ್ಬಂಧದ ಚರ್ಚೆ

ಕರ್ನಾಟಕದಲ್ಲಿ ಮತ್ತೆ ಚುರುಕಾದ ಮುಂಗಾರು ಮಳೆ

ಕರ್ನಾಟಕದಲ್ಲಿ ಮತ್ತೆ ಚುರುಕುಗೊಂಡ ಮುಂಗಾರು : ಮುಂದಿನ 7 ದಿನ ರಾಜ್ಯಾದ್ಯಂತ ಮಳೆ ಸಾಧ್ಯತೆ, ಕರಾವಳಿ-ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಕರಾವಳಿಯಲ್ಲಿ ನಾಡದೋಣಿ ಮೀನುಗಾರಿಕೆ ಆರಂಭವಾಗದೆ ಸಮುದ್ರ ತೀರದಲ್ಲಿ ಕಾಯುತ್ತಿರುವ ಮೀನುಗಾರರು

ಕರಾವಳಿಯಲ್ಲಿ ಇನ್ನೂ ಆರಂಭವಾಗದ ನಾಡದೋಣಿ ಮೀನುಗಾರಿಕೆ; ಬದುಕಿನ ಭರವಸೆಯಾದ ‘ಕೈರಂಪಣಿ’ಗಾಗಿ ಕಾಯುತ್ತಿರುವ ಮೀನುಗಾರರು

ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಕಡ್ಡಾಯ ಸಿಸಿಟಿವಿ ಅಳವಡಿಕೆ

ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಕಡ್ಡಾಯ ಸಿಸಿಟಿವಿ; ಭದ್ರತೆಗಾಗಿ ಸರ್ಕಾರದ ಮಹತ್ವದ ನಿರ್ಧಾರ

Leave a Comment