ಧರ್ಮಶಾಲದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ನಲ್ಲಿ ದೊಡ್ಡ ಅಂತರದಲ್ಲಿ ಗೆದ್ದ ಆರ್ಸಿಬಿ ನೇರವಾಗಿ ಫೈನಲ್ ತಲುಪಿದೆ.
ಮೇ 26 ರಂದು ನಡೆದ ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಗುಜರಾತ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 5 ವಿಕೆಟ್ ನಷ್ಟಕ್ಕೆ 254 ರನ್ ಗಳ ಬೃಹತ್ ಮೊತ್ತ ದಾಖಲಿಸಿತು. ರಜತ್ ಪಾಟೀದಾರ್ 93 ರನ್ ಸಿಡಿಸಿದರು. ವಿರಾಟ್ ಕೊಹ್ಲಿ 43 ರನ್, ದೇವದತ್ ಪಡಿಕ್ಕಲ್ 30 ರನ್, ಕೃನಾಲ್ ಪಾಂಡ್ಯ 43 ರನ್. ಗುಜರಾತ್ ಪರವಾಗಿ ರಬಾಡ ಮತ್ತು ಹೋಲ್ಡರ್ ತಲಾ 2 ವಿಕೆಟ್ ಪಡೆದರು.
254 ರನ್ ಗಳ ಬೃಹತ್ ಮೊತ್ತ ಚೇಸ್ ಮಾಡಲು ಹೋದ ಗುಜರಾತ್ ಟೈಟಾನ್ಸ್ ಗೆ ಪವರ್ ಪ್ಲೇ ಅಲ್ಲೇ ಆಘಾತವಾಯಿತು. ಪವರ್ ಪ್ಲೇ ಅಲ್ಲೇ 5 ವಿಕೆಟ್ ಕಳೆದುಕೊಂಡಿತು. ಅಂತಿಮ ವಾಗಿ ಗುಜರಾತ್ 162 ರನ್ ಮಾಡಲಷ್ಟೆ ಸಾಧ್ಯವಾಯಿತು. ಇದರಿಂದ 92 ರನ್ನಿಂದ ಗೆದ್ದ ಆರ್ಸಿಬಿ ಐಪಿಎಲ್ 2026 ರ ಫೈನಲ್ ಗೆ ಲಗ್ಗೆ ಇಟ್ಟಿದೆ.
ಮೊದಲ ಕ್ವಾಲಿಫೈಯರ್ ನಲ್ಲಿ ಸೋತ ಗುಜರಾತ್ ಟೈಟಾನ್ಸ್ ಗೆ ಇನ್ನೊಂದು ಅವಕಾಶ ಸಿಗಲಿದೆ ಮೇ 29 ರಂದು ನಡೆಯುವ ಕ್ವಾಲಿಫೈಯರ್ 2 ಅಲ್ಲಿ ಗೆದ್ದಾರೆ ಫೈನಲ್ ಗೆ ಪ್ರವೇಶ ಪಡೆಯಲಿದೆ .
ಇವತ್ತು ನಡೆಯುವ ರಾಜಸ್ಥಾನ ಮತ್ತು ಹೈದರಾಬಾದ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡವು ಗುಜರಾತ್ ಜೊತೆ ಸೆಣಸಾಟ ನಡೆಸಲಿದೆ ಅದರಲ್ಲಿ ಗೆದ್ದ ತಂಡ ಫೈನಲ್ ತಲುಪಲಿದೆ.











1 thought on “ಮೊದಲ ಕ್ವಾಲಿಫೈಯರ್ ಗೆದ್ದ ಆರ್ಸಿಬಿ. ಈ ಸಲನೂ ಕಪ್ ನಮ್ದೇನಾ?”