ವಿಟ್ಲ: ಆಮ್ನಿ ಕಾರು ಮತ್ತು ಜೀಪಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಆರು ಮಂದಿ ಗಾಯಗೊಂಡ ಘಟನೆ ಬುಧವಾರ ಕೇಪು ಗ್ರಾಮದ ಪಡಿಬಾಗಿಲು–ಮೈರ ನಡುವಿನ ತಿರುವಿನಲ್ಲಿ ನಡೆದಿದೆ.
ಲಭ್ಯ ಮಾಹಿತಿಯಂತೆ, ವಿಟ್ಲದಿಂದ ಬಾಯಾರು ಕಡೆಗೆ ಸಂಚರಿಸುತ್ತಿದ್ದ ಜೀಪು ಹಾಗೂ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಆಮ್ನಿ ಕಾರು ಅಂತಾರಾಜ್ಯ ಹೆದ್ದಾರಿಯ ಮೈರ ಪ್ರದೇಶದಲ್ಲಿ ಪರಸ್ಪರ ಡಿಕ್ಕಿಯಾಗಿವೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ತೀವ್ರ ಹಾನಿಗೊಳಗಾಗಿದ್ದು, ಆಮ್ನಿ ಕಾರಿನಲ್ಲಿದ್ದ ಒಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ದುರ್ಘಟನೆಯಲ್ಲಿ ಆಮ್ನಿ ಕಾರಿನ ಚಾಲಕ ಕೃಷ್ಣ ಸೇರಿದಂತೆ ಪ್ರಕಾಶ್, ಸುಜಾತಾ, ಸುಮಂಗಳ ಹಾಗೂ ಶರಣ್ಯ ಗಾಯಗೊಂಡಿದ್ದಾರೆ. ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಉದಯನಾರಾಯಣ ಭಟ್ ಅವರಿಗೂ ಗಾಯಗಳಾಗಿವೆ.
ಅಪಘಾತದಿಂದ ಕೆಲಕಾಲ ಸಂಚಾರದಲ್ಲಿ ಅಡಚಣೆ ಉಂಟಾಗಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಮತ್ತಷ್ಟು ಓದಿ :
ನೆಲ್ಯಾಡಿ ಸಮೀಪ ಭೀಕರ ರಸ್ತೆ ಅಪಘಾತ : ಬೈಕ್‌ಗಳ ಮುಖಾಮುಖಿ ಡಿಕ್ಕಿಗೆ ಯುವಕ ಬಲಿ









