ವಿಟ್ಲ: ವಿಟ್ಲ–ಸಾಲೆತ್ತೂರು ಮುಖ್ಯರಸ್ತೆಯ ಕೊಡಂಗಾಯಿ ಕಾಪುಮಜಲು ಸಮೀಪ ಭಾನುವಾರ ಬೆಳಿಗ್ಗೆ ಎರ್ಟಿಗಾ ಕಾರು ಮತ್ತು ಹೋಂಡಾ ಡಿಯೋ ಸ್ಕೂಟರ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಲಭ್ಯವಿರುವ ಪ್ರಾಥಮಿಕ ಮಾಹಿತಿಯಂತೆ, ಅಪಘಾತದ ತೀವ್ರತೆಗೆ ಸ್ಕೂಟರ್ ಸಂಪೂರ್ಣ ಜಖಂಗೊಂಡಿದ್ದು, ಡಿಕ್ಕಿಯ ಪರಿಣಾಮ ಎರ್ಟಿಗಾ ಕಾರು ರಸ್ತೆ ಬದಿಯ ಚರಂಡಿಗೆ ಇಳಿದಿದೆ.
ಗಾಯಗೊಂಡ ಸವಾರನಿಗೆ ಸ್ಥಳದಲ್ಲೇ ಸ್ಥಳೀಯರು ನೆರವು ನೀಡಿ, ತಕ್ಷಣ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರು ರಸ್ತೆ ತಪ್ಪು ಬದಿಯಲ್ಲಿ ಸಂಚರಿಸಿದ್ದರಿಂದ ಈ ಅಪಘಾತ ಸಂಭವಿಸಿರಬಹುದು ಎಂದು ತಿಳಿದುಬಂದಿದೆ. ಆದರೆ ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಸಂಬಂಧಿತ ಅಧಿಕಾರಿಗಳ ಪರಿಶೀಲನೆಯ ಬಳಿಕವೇ ಸ್ಪಷ್ಟವಾಗಲಿದೆ.
ಮತ್ತಷ್ಟು ಓದಿ :
ನಾಟೆಕಲ್ ಬಳಿ ಭೀಕರ ರಸ್ತೆ ಅಪಘಾತ : ಇನ್ಫೋಸಿಸ್ ಉದ್ಯೋಗಿ ಮೃತ, ಸಹೋದ್ಯೋಗಿಗೆ ಗಾಯ









