---Advertisement---

‘ಹಲ್ಕಾ ಡಾನ್’ ಚಿತ್ರತಂಡದಿಂದ ಸರ್ಪ್ರೈಸ್ ! ರೂಪೇಶ್ ಶೆಟ್ಟಿ ಪಾತ್ರದ ಗೆಟಪ್ ನೋಡಿ ಎಲ್ಲರೂ ಅಚ್ಚರಿ!

drusti news logo
On: June 25, 2026
Rupesh Shetty Joins Halka Don Movie
---Advertisement---

ಬೆಂಗಳೂರು: ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರ ನಿರ್ಮಾಣದ ‘ಹಲ್ಕಾ ಡಾನ್’ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್ ಹೊರಬಿದ್ದಿದೆ. ವೀನಸ್ ಎಂಟರ್‌ಟೈನರ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಇದೀಗ ನಟ ರೂಪೇಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದಲ್ಲಿ ನಟ ಪ್ರಮೋದ್ ನಾಯಕನಾಗಿ ಅಭಿನಯಿಸುತ್ತಿದ್ದು, ಅಮೃತಾ ಅಯ್ಯಂಗಾರ್ ನಾಯಕಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ರೂಪೇಶ್ ಶೆಟ್ಟಿ ಅವರ ಪಾತ್ರದ ವಿಶೇಷ ಗೆಟಪ್ ಅನ್ನು ಬಿಡುಗಡೆ ಮಾಡಿದ್ದು ಹೊಸ ಲುಕ್ ಸಿನಿಪ್ರಿಯರ ಗಮನ ಸೆಳೆದಿದೆ.

ತುಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ರೂಪೇಶ್ ಶೆಟ್ಟಿ ಅವರ ಸೇರ್ಪಡೆಯಿಂದ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ‘ಹಲ್ಕಾ ಡಾನ್’ ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿದ್ದು, ಚಿತ್ರತಂಡ ಅದನ್ನು ಅದ್ಧೂರಿಯಾಗಿ ರೂಪಿಸುತ್ತಿದೆ.

ಚಿತ್ರದ ಕುರಿತು ಮಾತನಾಡಿರುವ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಉತ್ತಮ ಕಥಾವಸ್ತು ಹೊಂದಿರುವ ಈ ಸಿನಿಮಾ ಪ್ರೇಕ್ಷಕರ ಮನಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ವರ್ಷವೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಸಿದ್ಧತೆ ನಡೆಯುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

ಚಲ ಅವರ ನಿರ್ದೇಶನದ ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ತಯಾರಾಗುತ್ತಿದೆ.

ಚಿತ್ರಕ್ಕೆ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದು, ಸತ್ಯ ಹೆಗಡೆ ಛಾಯಾಗ್ರಹಣದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಚಿತ್ರದ ಮುಂದಿನ ಅಪ್‌ಡೇಟ್‌ಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಮತ್ತಷ್ಟು ಓದಿ :

ಬಿಗ್ ಬಾಸ್ ಕನ್ನಡ 13 : ಹೊಸ ನಿರೀಕ್ಷೆಗಳು, ಹೊಸ ಮುಖಗಳು

ಅನುರಾಗ್ ಕಶ್ಯಪ್ ಕನ್ನಡದ ‘8’ ಚಿತ್ರದಲ್ಲಿ: ವಿಶೇಷ ಗ್ಲಿಂಪ್ಸ್ ಬಿಡುಗಡೆ

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

3 thoughts on “‘ಹಲ್ಕಾ ಡಾನ್’ ಚಿತ್ರತಂಡದಿಂದ ಸರ್ಪ್ರೈಸ್ ! ರೂಪೇಶ್ ಶೆಟ್ಟಿ ಪಾತ್ರದ ಗೆಟಪ್ ನೋಡಿ ಎಲ್ಲರೂ ಅಚ್ಚರಿ!”

Leave a Comment