ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಹಲವು ಬಾರಿ ಮುಂದೂಡಿಕೆಯಾಗಿದ್ದ ಈ ಚಿತ್ರ ಇದೀಗ 2026ರ ಆಗಸ್ಟ್ 26ರಂದು ವಿಶ್ವದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲಿದೆ.
ನಿರ್ದೇಶಕಿ ಗೀತು ಮೋಹನದಾಸ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಈಗಾಗಲೇ ದೇಶ-ವಿದೇಶಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಿಡುಗಡೆ ದಿನಾಂಕದೊಂದಿಗೆ ಹೊಸ ಪೋಸ್ಟರ್ವೊಂದನ್ನು ಚಿತ್ರತಂಡ ಅನಾವರಣಗೊಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ಕೆಜಿಎಫ್’ ಸರಣಿಯ ನಂತರ ಯಶ್ ನಟಿಸುತ್ತಿರುವ ಈ ಮೆಗಾ ಬಜೆಟ್ ಸಿನಿಮಾ ಅಪರಾಧ, ಅಧಿಕಾರ ಮತ್ತು ದ್ರೋಹದ ಕಥಾಹಂದರವನ್ನು ಒಳಗೊಂಡಿರುವ ಆಕ್ಷನ್ ಥ್ರಿಲ್ಲರ್ ಆಗಿದ್ದು, ಗೋವಾದ ಹಿನ್ನೆಲೆಯಲ್ಲಿನ ವಿಭಿನ್ನ ಲೋಕವನ್ನು ತೆರೆ ಮೇಲೆ ಕಟ್ಟಿಕೊಡಲಿದೆ.
ಚಿತ್ರದಲ್ಲಿ ಯಶ್ ಜೊತೆ ಹಲವು ಖ್ಯಾತ ನಟಿಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ಮತ್ತಷ್ಟು ಓದಿ :
400ನೇ ಸಿನಿಮಾದ ಮೈಲಿಗಲ್ಲು ತಲುಪಿದ ರಂಗಾಯಣ ರಘು; ‘ಹೊಸಜೀವನ’ ಚಿತ್ರದ ಮೂಲಕ ಹೊಸ ಅಧ್ಯಾಯ
‘ಹಲ್ಕಾ ಡಾನ್’ ಚಿತ್ರತಂಡದಿಂದ ಸರ್ಪ್ರೈಸ್ ! ರೂಪೇಶ್ ಶೆಟ್ಟಿ ಪಾತ್ರದ ಗೆಟಪ್ ನೋಡಿ ಎಲ್ಲರೂ ಅಚ್ಚರಿ!
ಬಿಗ್ ಬಾಸ್ ಕನ್ನಡ 13 : ಹೊಸ ನಿರೀಕ್ಷೆಗಳು, ಹೊಸ ಮುಖಗಳು; ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ ಜನಪ್ರಿಯ ರಿಯಾಲಿಟಿ ಶೋ















