ವಿಟ್ಲ: ಕೊಳ್ಳಾಡು ಗ್ರಾಮದ ಖಂಡಿಗ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ರಸಗೊಬ್ಬರವನ್ನು ವಿಟ್ಲ ಪೊಲೀಸರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
632 ಯೂರಿಯಾ ಚೀಲಗಳು ಹಾಗೂ ಲಾರಿ ವಶಕ್ಕೆ
ಪೊಲೀಸರ ಮಾಹಿತಿಯಂತೆ, ಖಂಡಿಗ ನಿವಾಸಿ ಮೊಹಮ್ಮದ್ ಅಶ್ರಫ್ ಅವರ ಮನೆ ಆವರಣದಲ್ಲಿ ಮಹಜರು ನಡೆಸಿದ ವೇಳೆ ಕೇಂದ್ರ ಸರ್ಕಾರದ ಸಹಾಯಧನದಡಿ ವಿತರಿಸಲಾದ 632 ಯೂರಿಯಾ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ರಸಗೊಬ್ಬರ ಸಾಗಾಟಕ್ಕೆ ಬಳಸಲಾಗುತ್ತಿದ್ದ ಲಾರಿಯನ್ನೂ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. ಇದನ್ನು ಓದಿ : ವಿಟ್ಲದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ, ಮೂರು ತಿಂಗಳು ಪರ್ಯಾಯ ಮಾರ್ಗ ಬಳಕೆಗೆ ಸೂಚನೆ
ಸಹಕಾರಿ ಸಂಘಗಳಿಂದ ಖರೀದಿ ಮಾಡಿ ಸಂಗ್ರಹಿಸಿದ್ದ ಶಂಕೆ
ಪ್ರಾಥಮಿಕ ತನಿಖೆಯಲ್ಲಿ, ವಿವಿಧ ಸಹಕಾರಿ ಸಂಘಗಳಿಂದ ಯೂರಿಯಾವನ್ನು ಖರೀದಿಸಿ ಮನೆಗೆ ತಂದು ಸಂಗ್ರಹಿಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಬಳಿಕ ಅವುಗಳನ್ನು ಬೇರೆ ಚೀಲಗಳಿಗೆ ವರ್ಗಾಯಿಸಿ ಹೆಚ್ಚಿನ ದರಕ್ಕೆ ಕೇರಳದಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಈ ಅಕ್ರಮ ಚಟುವಟಿಕೆಯಲ್ಲಿ ಸತೀಶ್ ಎಂಬಾತನ ಪಾತ್ರವೂ ಇರುವುದಾಗಿ ತನಿಖೆಯಲ್ಲಿ ತಿಳಿದುಬಂದಿದ್ದು, ಯೂರಿಯಾ ಪೂರೈಕೆ ಹಾಗೂ ಅದರ ಸಾಗಾಟದಲ್ಲಿ ಸಹಕರಿಸಿದ್ದಾನೆ ಎನ್ನಲಾಗಿದೆ.
ಇದಕ್ಕೂ ಮೊದಲು ಅಕ್ರಮ ಸಾಗಾಟಕ್ಕೆ ಬಳಸಲಾಗುತ್ತಿದ್ದ ಕೆಲವು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರೆಂಬ ಮಾಹಿತಿಯೂ ಹೊರಬಂದಿದೆ. ಆದಾಗ್ಯೂ, ಚಟುವಟಿಕೆ ಮುಂದುವರಿದಿರುವ ಕುರಿತು ತನಿಖಾ ತಂಡ ಪರಿಶೀಲನೆ ನಡೆಸುತ್ತಿದೆ.
ವಿಟ್ಲ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಅವರ ನೇತೃತ್ವದ ತಂಡ ದಾಳಿ ನಡೆಸಿ, ಲಾರಿ ಸಹಿತ ಸುಮಾರು 45 ಕೆಜಿ ತೂಕದ 632 ಯೂರಿಯಾ ಚೀಲಗಳನ್ನು ವಶಪಡಿಸಿಕೊಂಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮತ್ತಷ್ಟು ಓದಿ :
ಫ್ಲ್ಯಾಟ್, ಕಾರು, ಚಿನ್ನದ ಆಮಿಷ ; ಲಕ್ಕಿ ಸ್ಕೀಮ್ ಹೆಸರಿನಲ್ಲಿ ಕೋಟ್ಯಂತರ ವಂಚನೆ!









